ಶಿಕ್ಷಣ ಹುಲಿ ಹಾಲು ಇದ್ದಂತೆ ಮಕ್ಕಳಿಗೆ ಶಿಕ್ಷಣವೇ ಮುಖ್ಯ : ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ
ಅಥಣಿ :ಜೂ.19: ಶಿಕ್ಷಣವೆಂಬುವುದು ಹುಲಿಯ ಹಾಲು ಇದ್ದ ಹಾಗೆ ಅದನ್ನು ಕುಡಿದವರು ಗರ್ಜಿಸಲೇಬೇಕು ಎಂಬ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತಿನಂತೆ ಮಕ್ಕಳಿಗೆ ಶಿಕ್ಷಣವೇ ಮುಖ್ಯ ವಿದ್ಯಾರ್ಥಿಗಳ ಪ್ರತಿಭೆಗೆ ಬೆಲೆ ಸಿಗಬೇಕಾದರೆ ಶಿಕ್ಷಣ ಬಹಳ ಮಹತ್ವದ್ದು ಎಂದು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರು ಹೇಳಿದರು
ಅವರು ಪಟ್ಟಣದ ಆರ್ ಎಸ್ ಪಿ ಸಭಾಭವನದಲ್ಲಿ ಹಮ್ಮಿಕೊಂಡ ತಮ್ಮ ಮಗಳ ಹುಟ್ಟುಹಬ್ಬ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು
ಯುವಕರು ಓದುವ ಸಮಯದಲ್ಲಿ ಕಾಲಹರಣ ಮಾಡದೆ ತಂದೆ ತಾಯಿಯ ಆಸೆಯಂತೆ ಒಳ್ಳೆಯ ಶಿಕ್ಷಣ ಪಡೆದು ದೊಡ್ಡ ಸರ್ಕಾರಿ ಕೆಲಸವನ್ನು ಪಡೆದಾಗ ಮಾತ್ರ ವಿದ್ಯಾರ್ಥಿಗೆ ತನ್ನ ಪ್ರತಿಭೆಗೆ ಬೆಲೆ ಸಿಕ್ಕಂತಾಗುತ್ತದೆ ಬರುವ ದಿನಮಾನಗಳಲ್ಲಿ ಚಂಪಾ ಕಾಶಿನಾಥ ಗಡಾದಿ (ಸಿಕೆಜಿ) ಫೌಂಡೇಶನ್ ವತಿಯಿಂದ ಅತ್ಯಂತ ಹಿಂದುಳಿದ ಜನಾಂಗ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಹಣದ ನೆರವು ಮತ್ತು ಐಎಎಸ್. ಕೆಎಎಸ್ ಓದುವ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್ ಮತ್ತು ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತಗೆಯಲಾಗುವುದು ಎಂದರು.
ಈ ವೇಳೆ ನ್ಯಾಯವಾದಿ ರಾಮು ಮರೇಳರ ಮಾತನಾಡಿ ರವೀಂದ್ರ ಗಡಾದಿ ಸಾಹೇಬರು ಸಿ ಕೆ ಜಿ ಫೌಂಡೇಶನದಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದ್ದು ಇಂತಹ ಒಂದು ಶಿಕ್ಷಣ ಸಂಸ್ಥೆ ತಗೆಯುತ್ತಿರುವುದು ನಮ್ಮ ಅಥಣಿ ತಾಲೂಕಿಗೆ ಸಂತೋಷದ ಸಂಗತಿ ಇಂತಹ ಒಳ್ಳೆಯ ಕಾರ್ಯಕ್ಕೆ ನಾವು ಸದಾ ನಿಮ್ಮ ಜೊತೆಗಿದ್ದು ಸಹಕರಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಭೀಮು ಕಾಂಬಳೆ, ಪಿಎಸ್ ಐ ವಿಜಯ ವಗ್ಗಿ, ದಲಿತ ಮುಖಂಡ ಗೌತಮ ಪರಾಂಜಪೆ, ಪ್ರವೀಣ ಕಾಂಬಳೆ, ಆರ್ ಎಸ್ ಪಿ ಸಂಸ್ಥಾಪಕ ರವಿ ಪೂಜಾರಿ. ಕುಮಾರ ಗಸ್ತಿ, ಜೀವನ ಸತ್ತಿಕರ, ರತನ ಹಿರಟ್ಟಿ, ಮಂಜು ನೂಲಿ, ರಾಕೇಶ ಪಟ್ಟಣ, ಶಶಿಕಾಂತ ಪಟ್ಟಣ, ಅಪು ಘಟಕಾಂಬಳೆ, ಸುಕಮಾರ ಕಾಂಬಳೆ, ನಿಶಹಾಂತ ಮಡ್ಡಿ, ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.