ರೇಣುಕಾ ಸ್ವಾಮಿ ಹತ್ಯೆಗೆ ಜಕ್ಕಾ ಖಂಡನೆ
ಬೀದರ್:ಜೂ.19: ಚಿತ್ರದುರ್ಗದ ಅಪೆÇಲೊ ಫಾರ್ಮಸಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ನಟ ದರ್ಶನ್ ಮತ್ತು ಅವರ ಸಹಚರರ ನಡೆ ಇಡೀ ಮಾನವ ಕುಲಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಕರ್ನಾಟಕ ವೀರಶೈವ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾಶಿನಾಥ ಜಕ್ಕಾ ಅಭಿಪ್ರಾಯ ಪಟ್ಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನಟ ದರ್ಶನ್ ನ ಸ್ನೇಹಿತೆ ಪವಿತ್ರಾ ಗೌಡಾ ಅವರಿಗೆ ಕೇವಲ ಮೆಸೆಜ್ ಕಳುಹಿಸಿರುವ ಕಾರಣಕ್ಕೆ ಇಂಥ ಹೆಯ ಕೃತ್ಯ ಎಸಗಿದ ದರ್ಶನ್ ಐಂಡ್ ಗ್ಯಾಂಗ್ ಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು, ಅವರಿಗೆ ನೀಡುವ ಶಿಕ್ಷೆ ನೋಡಿ ಭವಿಷ್ಯದಲ್ಲಿ ಯಾರು ಇಂಥ ಅಮಾನವಿಯ ಕೃತ್ಯ ಎಸಗಬಾರದು.
ರೇಣುಕಾ ಸ್ವಾಮಿ ಓರ್ವ ಜಂಗಮರ ಮಗ. ಲಿಂಗಾಯತರಿಗೆ ಜಂಗಮರೆಂದರೆ ಗುರು ಸಮಾನ. ಅಂಥವರಿಗೆ ಇಂಥ ರಾಕ್ಷಸರು ಈ ರೀತಿ ಕೊಲೆ ಮಾಡಿದ್ದಾರೆಂದರೆ ನಿಜಕ್ಕೂ ನಾವು ರಾಕ್ಷಸ ದೇಶದಲ್ಲಿ ಇದ್ದೇವೆ ಎಂಬಂತಾಗಿದೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳ ಮಾರಣ ಹೋಮ ನಡೆಯುತ್ತಿದ್ದು, ಸದ್ಯ ನಮ್ಮ ರಾಜ್ಯ ಬಿಹಾರ ರಾಜ್ಯವಾಗಿ ಮಾರ್ಪಟ್ಡಿದೆ.
ಇಂಥ ಘಟನೆಗಳು ಪದೆ ಪದೆ ನಡೆಯುತ್ತಿದ್ದರೂ ನಮ್ಮ ವೀರಶೈವ ಸಮಾಜದ ಸಚಿವರು ಹಾಗೂ ಶಾಸಕರು ದಿವ್ಯ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎಂದು ಪ್ರಕಟಣೆಯಲ್ಲಿ ದೂರಿರುವ ಜಕ್ಕಾ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಜಂಗಮರ ಶ್ರಾಪಕ್ಕೆ ಗುರಿಯಾಗುವುದಕ್ಕಿಂತ ಮುಂಚೆ ಎಚ್ಚೆತ್ತು ನೇಹಾ ಹಿರೇಮಠ, ಅಂಜಲಿ ಅಂಬಿಗಾರ, ರೇಣುಕಾ ಸ್ವಾಮಿ ಅವರ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.