ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು
ಬಸವಕಲ್ಯಾಣ: ಜೂ.19:ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಖೇರ್ಡಾ(ಬಿ) ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಸಸ್ತಾಪೂರ ಗ್ರಾಮದ ನಿವಾಸಿ ಮುಜಾಮೀಲ್ ಖಾಜಾಮಿಯ್ಯ (15) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕನಾಗಿದ್ದಾನೆ.
ಮೂಲತಃ ಸಸ್ತಾಪೂರ ಗ್ರಾಮದವನಾಗಿರುವ ಈತ ಕಳೆದ ಕೆಲ ದಿನಗಳಿಂದ ತನ್ನ ತಾಯಿ ತವರು ಮನೆಯಾಗಿರುವ ತಡೋಳಾ ಗ್ರಾಮದಲ್ಲಿ ನೆಲೆಸಿದ್ದ. ಮಂಗಳವಾರ ಸಂಜೆ ತನ್ನ ಐವರು ಗೆಳೆಯರೊಂದಿಗೆ ತಾಲೂಕಿನ ಖೇರ್ಡಾ(ಬಿ) ಗ್ರಾಮದ ಬಳಿಯ ಮುಲ್ಲಾಮಾರಿ ಜಲಾಶಯದ ಹಿನ್ನೀರಿನಲ್ಲಿ ಈಜಾಡಲೆಂದು ತೆರಳಿದ್ದ. ಆದರೆ ನೀರಿನಾಳದಲ್ಲಿ ಮುಳುಗಿ ಮೇಲೆ ಬಾರಲಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದೊಂದಿಗೆ ನೀರಿನಲ್ಲಿ ಮುಳುಗಿ ನಾಪ್ತೆಯಾಗಿದ್ದ ಬಾಲಕನ ಶವ ಹೊರ ತಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದಿ ತಿಳಿದ ಪಿಎಸ್‍ಐ ರೇಣುಕಾ ಉಡಗಿ ನೇತೃತ್ವದ ಪೆÇಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ಮುಡಬಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.