ಮೊಬೈಲ್ ಬಳಕೆಯಲ್ಲಿ ಸುರಕ್ಷಾ ಕ್ರಮ ಅಗತ್ಯ
ಹುಬ್ಬಳ್ಳಿ,ಜೂ19: ಪೆÇಲೀಸ್ ಎಂದರೇ ಭಯವಲ್ಲ ಭರವಸೆ ಎಂಬುದನ್ನು ಜನತೆ ಅರಿತುಕೊಳ್ಳಿ ಎಂದು ಹು-ಧಾ ಪೆÇಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.
ನಗರದಲ್ಲಿ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹು-ಧಾ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಇಐಆರ್ ಪೆÇೀರ್ಟಲ್ ಮುಖಾಂತರ ಪತ್ತೆಹಚ್ಚಿದ ಮೊಬೈಲ್ ಫೆÇೀನ್‍ಗಳ ವಿತರಣಾ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಪ್ರತಿಯೊಬ್ಬರಿಗೂ ಮೊಬೈಲ್ ಪ್ರಪಂಚವಾಗಿ ಮಾರ್ಪಟ್ಟಿದೆ . ಏಳುವಾಗಲೂ, ಮಲಗುವಾಗಲೂ ಮೊಬೈಲ್ ನೋಡುತ್ತೇವೆ. ಅದೊಂದು ಕಿರಿಯ ಜಗತ್ತಾಗಿ ಮಾರ್ಪಟ್ಟಿದೆ. ಇಂತಹ ಮೊಬೈಲ್ ಕಳೆದುಕೊಂಡಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇಂತಹ ವೇಳೆ ಎದೆಗುಂದದೆ ಕೂಡಲೇ ಸಿಇಐಆರ್ ಪೆÇೀರ್ಟಲ್ ಮೂಲಕ ದೂರು ಸಲ್ಲಿಸಿ, ಮೊಬೈಲ್ ಖರೀದಿ ಮಾಡಿದ ವೇಳೆ ಆಎಂಇಐ ಕಾಯ್ದಿರಿಸಬೇಕು. ಮೊಬೈಲ್ ಕಳೆದುಕೊಂಡ ಕೂಡಲೇ ಸ್ಥಳೀಯ ಪೆÇಲೀಸರಿಗೆ ಮಾಹಿತಿ ನೀಡುವುದು ಅವಶ್ಯವಾಗಿದೆ ಎಂದರು.
ಸಾರ್ವಜನಿಕರು ಮೊಬೈಲ್ ಬಳಸುವಾಗ ಸೂಕ್ತ ಸುರಕ್ಷಾ ಕ್ರಮಗಳನ್ನು ಪಾಲಿಸುವುದು ಅತ್ಯವಶ್ಯಕ. ಮೊಬೈಲ್ ಮೂಲಕ ನಿತ್ಯವೂ ಸಾರ್ವಜನಿಕರು ಮೋಸ ಹೋಗುತ್ತಿರುವ ಕುರಿತು ದಿನವೂ ಸೈಬರ್ ಠಾಣೆಗೆ ಹತ್ತಾರು ದೂರುಗಳು ದಾಖಲು ಆಗುತ್ತಿವೆ. ಸೈಬರ್ ಕ್ರೈಂ ಕುರಿತು ಹತ್ತಾರು ಜಾಗೃತಿ ಕಾರ್ಯಕ್ರಮ ಕೈಗೊಂಡು ಜನರಿಗೆ ಅರಿವು ಮೂಡಿಸಿದರೂ ಸಹ ಮೋಸಕ್ಕೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಾವುದೇ ಹಣಕಾಸಿನ ಮೋಸಕ್ಕೆ ಒಳಗಾದರೇ 1930 ಸಂಖ್ಯೆಗೆ ಹಾಗೂ ಸಾರ್ವಜನಿಕರು ಸಮಸ್ಯೆಗೆ ಒಳಗಾದರೇ 112 ಗೆ ಕರೆ ಮಾಡಿ ದೂರು ಸಲ್ಲಿಸಿದರೆ, ಕೂಡಲೇ ಪೆÇಲೀಸರು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.
ಇದೇ ವೇಳೆ ಒಂದು ವರ್ಷದಲ್ಲಿ ಕಳ್ಳತನವಾಗಿದ್ದ 49 ಲಕ್ಷ ಮೌಲ್ಯದ 315 ಮೊಬೈಲ್ ಗಳನ್ನು ವಾರಸುದಾರರಿಗೆ ಮರಳಿ ನೀಡಲಾಗಿದೆ ಎಂದರು. ದಾಖಲಾಗಿದ್ದ ಪ್ರಕರಣದಲ್ಲಿ ಶೇ. 30 ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನುಳಿದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಶೀಘ್ರದಲ್ಲೇ ಪತ್ತೆ ಹಚ್ಚಿ ಮರಳಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ, ಎಸಿಪಿ ಶಿವಪ್ರಕಾಶ್ ನಾಯ್ಕ್ ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಸಿಇಎನ್ ಎಸಿಪಿ ಶಿವರಾಜ್ ಕಟಕಭಾವಿ ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳು ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು.