ಪ್ರಕರಣಗಳ ವಾಪಸಿಗೆ ಮನವಿ
ನವಲಗುಂದ,ಜೂ.19: ರೈತರ ಹೋರಾಟಗಾರರ ಮೇಲೆ ಇದ್ದಂತಹ ಪ್ರಕರಣ ಕೇಸುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಜ್ಯಾತ್ಯಾತೀತ ಪಕ್ಷಾತೀತ ಮಹಾದಾಯಿ ಕಳಸಾ ಬಂಡೂರಿ ರೈತ ಕೇಂದ್ರ ಸಮಿತಿ ಹೋರಾಟಗಾರರು ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿಯವರಿಗೆ ಧಾರವಾಡದಲ್ಲಿ ಮನವಿ ಸಲ್ಲಿಸಿದರು.
2015 ರಿಂದ ಮಹಾದಾಯಿ ನದಿಯ ವಿಷಯವಾಗಿ ಕೋರ್ಟ ಅಂತಿಮ ಆದೇಶ ಗೆಜೆಟ್ ನೋಟಿಪಿಕೇಷನ್ ಹೊರಡಿಸಿದರು ಕೂಡಾ ಅರಣ್ಯ ಮತ್ತು ವಣ್ಯಜೀವಿಗಳ ಇಲಾಖೆಯಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ ಹಾಗಾಗಿ ಆದಷ್ಟು ಬೇಗನೆ ತಾವು ಅನುಮತಿ ಕೊಡಿಸಬೇಕು
ರೈತರಿಗೆ ಸಾಲ ಕೊಡುವಾಗ ಬ್ಯಾಂಕಿನಲ್ಲಿ ಸಿಬಿಲ್ ರಿಪೆÇೀರ್ಟನ್ನು ತೆಗೆದುಹಾಕಬೇಕು, 2022-23 ನೇ ಸಾಲಿನ ವಿಮೆ ಕಟ್ಟಿದ ರೈತರಿಗೆ ಕೃಷಿ ಇಲಾಖೆಯ ಹಾಗೂ ಕಂದಾಯ ಇಲಾಖೆಯವರಿಂದ ಜಿ ಪಿ ಎಸ್ ಮಾಡಿದ ತಪ್ಪಿನಿಂದ ಬೆಳೆ ವಿಮೆ ಪರಿಹಾರ ವಂಚಿತರಾಗಿರುತ್ತಾರೆ.
ಬೆಳೆ ವಿಮಾದಲ್ಲಿ ರೈತರಿಗೆ ಅದರಲ್ಲಿ ಇದ್ದಂತಹ ಕಂಡೀಷನ್ ಹಾಗೂ ಕಾನೂನುಗಳು ವಿಮಾ ಕಂಪನಿ ಅನುಕೂಲವಾಗಿರುತ್ತವೆ, ಹಾಗೂ ರೈತರಿಗೆ ವಿರೋಧವಾಗಿರುತ್ತವೆ. ಇದನ್ನು ಸರಿಪಡಿಸಬೇಕು.
ಹುಬ್ಬಳ್ಳಿಯ ರೈಲ್ವೆ ಇಲಾಖೆ ಹಾಗೂ ಬಿ ಎಸ್ ಎನ್ ಎಲ್ ಕಚೇರಿಯವರ ಕೇಸುಗಳು ರೈತರ ಮೇಲಿರುವದರಿಂದ ಈ ಕೇಸುಗಳು ಕೇಂದ್ರ ಸರಕಾರಕ್ಕೆ ಸಂಬಂದ ಪಟ್ಟಿರುತ್ತವೆ ತಾವು ಮನಸ್ಸು ಮಾಡಿ ಹೋರಾಟಗಾರರ ಮೇಲೆ ಇದ್ದಂತಹ ಕೇಸುಗಳನ್ನು ಮುಕ್ತಿಗೊಳಿಸಬೇಕೆಂದು ಮನವಿ ಪತ್ರ ನೀಡಿದ್ದಾರೆ.
ಅಧ್ಯಕ್ಷ ರಘುನಾಥರಡ್ಡಿ, ನಡುವಿನಮನಿ, ಮುಖಂಡರಾದ ಲೋಕನಾಥ ಹೇಬಸೂರ, ಪಕ್ಕೀರಗೌಡ ಗೌಡಪ್ಪಗೌಡ, ಮಲ್ಲಿಕಾರ್ಜುನಗೌಡ ಕುಲಕರ್ಣಿ, ವಿಠ್ಠಲ ವಕ್ಕುಂದ, ಗೌಡಪ್ಪಗೌಡ ದೊಡಮನಿ, ರಮೇಶ ನಾಗಮ್ಮನವರ ಇತರರು ಇದ್ದರು.