ಕಳಪೆ ಕಾಮಗಾರಿ ಬೇಡ
ಚನ್ನಮ್ಮನ ಕಿತ್ತೂರು,ಜೂ: 19 ಕಾಮಗಾರಿಗಳು ಕಳಪೆ ಮಟ್ಟದ್ದಾಗಿರಬಾರದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ತಾಲೂಕಿನ ನೇಸರಗಿ ಗ್ರಾಮದ ಕುವೇಂಪು ಶತಮಾನೋತ್ಸವದ ಮಾದರಿ ಶಾಲೆಯ ನೂತನ ಕೊoಡಿ ಕಟ್ಟಡದ ಅಂದಾಜು 36 ಲಕ್ಷ ರೂ. ಕಾಮಗಾರಿಯ ಭೂಮಿ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು. ಶಾಲೆಗಳಲ್ಲಿ ನಮ್ಮ-ನಿಮ್ಮೆಲ್ಲ ಮಕ್ಕಳು ಓದುತ್ತವೆ. ಜೊತೆಯಲ್ಲಿ ಶಿಕ್ಷಕರುÀ ಇರುತ್ತಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ಕೊಡುತ್ತಿದೆ .ಆ ಕಾರಣದಿಂದ ಗುತ್ತಿಗೆದಾರರು ಕಾಮಗಾರಿಗಳನ್ನು ಕಳಪೆ ಮಟ್ಟದ್ದು ಮಾಡಬಾರದು. ಅಂತಹದ್ದೇನಾದು ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡು ಬಿಲ್ ತಡೆಹಿಡಿಯಲಾಗುವುದೆಂದರು.
ಈ ವೇಳೆ ಮಾಜಿ ಜಿಪಂ ಸದಸ್ಯ ನಿಂಗಪ್ಪ ಹರಕೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸೇರಿದಂತೆ ಸೇರಿದಂತೆ ಗ್ರಾಮದ ಹಿರಿಯರು, ಕಾರ್ಯಕರ್ತರು, ಶಿಕ್ಷಕರ ಬಳಗ, ಇನ್ನಿತರಿದ್ದರು.