ಸತ್ತೂರಿನಲ್ಲಿ ಶ್ರೀಮದ್ ಭಗವದ್ಗೀತಾ ಅಭಿಯಾನ
ಸತ್ತೂರು,ಜೂ19 : ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ,ಭಾರತಾದ್ಯಂತ ಹಮ್ಮಿಕೊಂಡಿರುವ ,ಶ್ರೀಮದ್ ಭಗವದ್ಗೀತಾ ಅಭಿಯಾನ , 17ನೇ ಅಧ್ಯಾಯವಾದ ಶ್ರದ್ಧಾತ್ರಯ ವಿಭಾಗ ಯೋಗದ ಕಾರ್ಯಕ್ರಮವು ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ತಡಸಿನಕೊಪ್ಪ ರಸ್ತೆಯ ವನಸಿರಿನಗರದಲ್ಲಿರುವ ಧೀರೇಂದ್ರ ತಂಗೋಡ ಅವರ ನಿವಾಸದಲ್ಲಿ ಬರುವ ಶನಿವಾರ ಮತ್ತು ಭಾನುವಾರ ಅಂದರೆ ದಿನಾಂಕ 22 ಮತ್ತು 23ನೇ ಜೂನ್, 2024 ರಂದು ಸಾಯಂಕಾಲ 6ರಿಂದ ನಡೆಯಲಿದೆ.
ವಿಶೇಷ ಉಪನ್ಯಾಸಕರಾಗಿ ಪಂ.ಪುಷ್ಕರ್ ಆಚಾಯ9 ಶಿರಹಟ್ಟಿ ಆಗಮಿಸಲಿದ್ದಾರೆ. ಇದಕ್ಕೂ ಪೂರ್ವ, ನಾರಾಯಣಿ ಭಜನಾ ಮಂಡಳಿ ಅವರಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ವಿಷ್ಣು ಸಹಸ್ರನಾಮದಿ ಹರಿವಾಯು ಗುರುಗಳ ಪಾರಾಯಣ ನಡೆಯಲಿದೆ. ಸಕಲ ಸದಸ್ಯರು ಸಕಾಲಕ್ಕೆ ಆಗಮಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 63 61 83 57 10 ಸಂಪರ್ಕಿಸಲು ಬಳಗದ ಕಾರ್ಯದರ್ಶಿ, ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ.