ಪ್ರಚಾರ ರಥಕ್ಕೆ ಚಾಲನೆ
ಬೀದರ:ಜೂ.19: ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ದಿನಾಂಕ 20 ಜೂನ್ 2024 ರಂದು ಜರುಗಲಿರುವ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಗುರುವಂದನಾ ಹಾಗೂ ತುಲಾಭಾರ ಕಾರ್ಯಕ್ರಮದ ಪ್ರಚಾರ ರಥಕ್ಕೆ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಶ್ರೀ ಬಸವರಾಜ ಕೋರಕೆ ಚಾಲನೆ ನೀಡಿದರು.
ಡಾ. ಬಸವರಾಜ ಸ್ವಾಮಿ, ವಿರಣ್ಣ ಶೀಲವಂತ, ರಾಮೇಶ ರಾಜೋಳೆ, ಸೂರ್ಯಕಾಂತ ಮಠ, ಸಿದ್ರಾಮ ಕವಳೆ, ಶರಣು ಪವಾಡಶೆಟ್ಟಿ, ಶಾಂತವೀರ ಸ್ವಾಮಿ ಪೂಜಾರಿ, ರಾಜಕುಮಾರ ದೇಗಾಂವ, ಹುಲೆಪ್ಪ ಘಾಳೆ ನಾರಾಯಣಪೂರ, ಬಸವತಿರ್ಥ್ ಸ್ವಾಮಿ, ಸಂತೋಷ ಕಲ್ಲೂರ ಮುಂತಾದವರು ಉಪಸ್ಥಿತರಿದ್ದರು.