ಇಂದಿರಾ ಕ್ಯಾಂಟೀನ್ ಆಹಾರ ಸರಬರಾಜು ಗುತ್ತಿಗೆ ಸ್ಥಳೀಯರಿಗೆ ನೀಡಿ
ಕಲಬುರಗಿ,ಜೂ.19- ಜೈ ಕನ್ನಡಿಗರ ಸೇನೆಯ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕಲಬುರಗಿ ಮತ್ತು ಜಿಲ್ಲೆಯ ಇಂದಿರಾ ಕ್ಯಾಂಟೀನ್‍ಗಳ ಆಹಾರ ಸರಬರಾಜು ಗುತ್ತಿಗೆಯನ್ನು ಸ್ಥಳೀಯರಿಗೆ ನೀಡುವಂತೆ ಒತ್ತಾಯಿಸಲಾಯಿತು.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಏಳು ಇಂದಿರಾ ಕ್ಯಾಂಟೀನ್ ಹಾಗೂ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟಿನ್‍ಗಳಲ್ಲಿ ಆಹಾರ ತಯಾರಿಸಿ ಸಾರ್ವಜನಿಕರಿಗೆ ವಿತರಿಸುವ ಟೆಂಡರನ್ನು ಕರೆಯಲಾಗಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಬೇರೆ ರಾಜ್ಯದವರಾದ ರಿವಾರ್ಡ್ ಸಂಸ್ಥೆದೆಹಲಿ, ಹಾಗೂ ಚೆಫ್ಲಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಲಿಮಿಡೆಟ್ ಬಾಂಬೆ ಸಂಸ್ಥೆಯವರು ಭಾಗವಹಿಸಿದ್ದಾರೆ. ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳÀ ಸೇವೆ ತೀರ ಕಳಪೆಯಿಂದ ಕೂಡಿದೆ ಎಂದು ಸೇನೆ ಅಧ್ಯಕ್ಷ ದತ್ತು ಭಾಸಗಿ ಅವರು ಆರೋಪಿಸಿದ್ದಾರೆ.
ಕಲಬುರಗಿ ನಗರದಲ್ಲಿ ಚೆಫಾಕ್ ಸಂಸ್ಥೆಯವರು ಈ ಹಿಂದೆ ಸುಮಾರು 20 ತಿಂಗಳಿಂದ ಕ್ಯಾಂಟೀನ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ. ಬಡವರಿಗೆ ಕಡಿಮೆ ದರದಲ್ಲಿ ಸಿಗಬೇಕಾದ ಆಹಾರ ಸಿಗದಂತೆ ಮಾಡಿದ್ದಾರೆ. ನಾವು ಕಂಪನಿಯ ಮ್ಯಾನೇಜರ್‍ಗೆ ಕೇಳಿದರೆ ನಮ್ಮ ಎಂ.ಡಿ. ಬಾಂಬೆದಲ್ಲಿದ್ದಾರೆ ಅವರನ್ನು ಕೇಳಿ ಎಂಬ ಬೇಜವಾಬ್ದಾರಿ ಉತ್ತರ ಕೊಡುತ್ತಿದ್ದಾರೆ. ಹಾಗೆಯೇ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ವೇತನವನ್ನು ಕೂಡ ಸರಿಯಾಗಿ ಕೊಟ್ಟಿರುವುದಿಲ್ಲ ಎಂಬ ದೂರುಗಳಿವೆ ಹೀಗಾಗಿ ಅನ್ಯ ರಾಜ್ಯಗಳ ಸಂಸ್ಥೆಗಳಿಗೆ ಟೆಂಡರ್ ನಿಡದೆ ಸ್ಥಳೀಯರಿಗೆ ನೀಡುವಂತೆ ಸೇನೆ ಮನವಿ ಸಲ್ಲಿಸಿದೆ.