ಅಂತರಂಗದ ಸತ್ಪ್ರೇರಣೆಯೇ ಭಕ್ತಿ ಹಾರಕೂಡ ಶ್ರೀ
ಬೀದರ್:ಜೂ.19: ಭಕ್ತಿ, ಶ್ರದ್ಧೆ ಅನ್ನೋದು ಬರಿ ನಂಬಿಕೆ ಅಲ್ಲ, ಅದೊಂದು ಪರಿಪೂರ್ಣತೆಯನ್ನು ಪರಮಾತ್ಮನನ್ನು ಅತ್ಯಂತ ಗಾಢವಾಗಿ ತನ್ನಲ್ಲಿ ಧರಿಸಿಕೊಳ್ಳುವ ಅಂತರಂಗದ ಸತ್ಪ್ರೇರಣೆಯಾಗಿದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಮೈಸಲಗಾ ಗ್ರಾಮಸ್ಥರಿಂದ ಆಯೋಜಿಸಿರುವ ಭಕ್ತಿ ನಮನ ಹಾಗೂ 663ನೇ ತುಲಾಭಾರ ಸಮಾರಂಭದ ಪಾವನ ಸನ್ನಿಧಾನವಹಿಸಿ ಮಾತನಾಡಿದ ಶ್ರೀಗಳು ನಮ್ಮನ್ನು ನಾವು ಸಂಪೂರ್ಣವಾಗಿ ಇಲ್ಲವಾಗಿಸಿಕೊಂಡು ಶೂನ್ಯ ಭಾವದಿಂದ ಭಗವಂತನಲ್ಲಿ ಗುರುವಿನ ಚರಣಡಿ ಯಲ್ಲಿ ಸಮರ್ಪಿತವಾಗುವುದನ್ನು ಭಕ್ತಿ ಎನಿಸಿಕೊಳ್ಳುತ್ತದೆ.
ಪು. ತಿ. ನ. ರವರು ಒಂದು ಕಡೆ ದೇವಗೊಂಬೆ ಪೂಜೆ ಆದ ಭಕ್ತಿ ಸೋಜಿಗ ಎಂದು ಹೇಳಿರುವುದನ್ನು ಉಲ್ಲೇಖಿಸುವುದಾದರೆ, ನಿಜವಾಗಿ ಜಗತ್ತಿನಲ್ಲಿ ಭಕ್ತಿ ಸೋಜಿಗವೇ ಹೌದು.
ಒಬ್ಬ ಗ್ರಹಿಣಿ ಅಡುಗೆ ಮನೆಯಲ್ಲಿ ಭಕ್ತಿಯಿಂದ ಅಡುಗೆ ಮಾಡಿದರೆ ಅದು ಅಮೃತವಾಗುತ್ತದೆ, ಹೀಗೆ ಪ್ರತಿಕ್ಷೇತ್ರದಲ್ಲಿಯೂ ನಾವು ಮಾಡುವ ಕೆಲಸ ಕಾರ್ಯಗಳಲ್ಲೂ ಭಕ್ತಿ ಸಮ್ಮಿತ ಗೊಂಡರೆ ಅದೊಂದು ಅದ್ಭುತ ಕಾರ್ಯವಾಗಿ ಮಾರ್ಪಡುತ್ತದೆ.
ಶ್ರೀಮಂತ ಅನುಭವಗಳೊಂದಿಗೆ ಬದುಕನ್ನು ಶೃಂಗಾರ ಮಯ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ, ಮೈಸಲಗಾ ಗ್ರಾಮದ ಅಧಿ ದೇವತೆ ಲಕ್ಷ್ಮಿ ಮಾತೆಯ ಕೃಪಾಸಿಂಧು ಎಲ್ಲರ ಬಾಳು ಬೆಳಗುವಂತಾಗಲಿ ಎಂದು ಹಾರೈಸಿದರು.
ಗ್ರಾಮದ ಹಿರಿಯರಾದ ಸೋಪಾನರಾವ ಪಾಟೀಲ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಶಿವಶರಯ್ಯಕಂಬಳಿ ಮಠ, ಮಲ್ಲಿನಾಥ ಹಿರೇಮಠ ಹಾರಕೂಡ ಗುರುಲಿಂಗಪ್ಪ ಸೈದಾಪುರೆ, ಸೋಪಾನರಾವ ಪಾಟೀಲ, ರೇವಣಸಿದ್ಧಪ್ಪ ಅಟ್ಟೂರ, ಗುಂಡೇರಾವ ಬಿರಾದಾರ, ಭೀಮಾಶಂಕರ ಪಾಟೀಲ, ಕಮಲಾಬಾಯಿ ಕಂಬಳಿಮಠ, ಬಲಭೀಮ ನೀಲೆ ಪಾಲ್ಗೊಂಡಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಗುಂಡಪ್ಪ ಪಾಟೀಲ ಯಳವಂತಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಭು ಸ್ವಾಮಿ ದೇವಣಗಾಂವ ವಂದಿಸಿದರು.
ಚಿತ್ರ : ತಾಲೂಕಿನ ಮೈಸಲಗಾ ಗ್ರಾಮಸ್ಥರಿಂದ ಆಯೋಜಿಸಿರುವ ಭಕ್ತಿ ನಮನ ಹಾಗೂ 663ನೇ ತುಲಾಭಾರ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.
ಶಿವಶರಯ್ಯಕಂಬಳಿ ಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಗುರುಲಿಂಗಪ್ಪ ಸೈದಾಪುರೆ, ಸೋಪಾನರಾವ ಪಾಟೀಲ, ರೇವಣಸಿದ್ಧಪ್ಪ ಅಟ್ಟೂರ, ಗುಂಡೇರಾವ ಬಿರಾದಾರ, ಭೀಮಾಶಂಕರ ಪಾಟೀಲ, ಕಮಲಾಬಾಯಿ ಕಂಬಳಿಮಠ, ಬಲಭೀಮ ನೀಲೆ, ಅಪ್ಪಣ್ಣ ಜನವಾಡ, ವಿಠಲ ಹೂಗಾರ ಮುಂತಾದವರೂ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡರಿಗೆ ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಜರುಗಿತು.