ಸತ್ಪಥದತ್ತ ಕರೆದುಕೊಂಡು ಹೋಗುವವನೇ ನಿಜವಾದ ಗುರು:ತೋಟೆಂದ್ರ ಶಿವಾಚಾರ್ಯರು
ಸಂಜೆವಾಣಿ ವಾರ್ತೆ
ಕೆಂಭಾವಿ:ಜೂ.19:ಜೀವನದ ಆರಂಭದಿಂದ ಹಿಡಿದು ಅಂತ್ಯದವರೆಗೆ ಬರುವ ಕಾಲಘಟ್ಟದಲ್ಲಿ ಕೇವಲ
ಹಣ ಗಳಿಕೆ ಶಾಶ್ವತವಲ್ಲ, ಗುಣ ಗಳಿಕೆ ಶಾಶ್ವತ ಎಂದು ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನಮಠದ ಡಾ.ಚನ್ನ ತೋಟೇಂದ್ರ ಶಿವಾಚಾರ್ಯರು ನುಡಿದರು.
ಪಟ್ಟಣದ ಸಮೀಪ ಕರಡಕಲ್ ಶ್ರೀ ಕೋರಿಸಿದ್ದೇಶ್ವರ ಶಾಖಾ ಮಹಾಮಠದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನೆರವೇರಿದ 24 ನೆ ಜಾತ್ರಾ ಮಹೋತ್ಸವ, ಸರಳ ಸಾಮೂಹಿಕ ವಿವಾಹ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಧರ್ಮ, ಸಂಸ್ಕೃತಿ, ಸದ್ಗುಣ ಮತ್ತು ಸಂಸ್ಕಾರ ಈ ನಾಡಿನ ನಿಜವಾದ ಆಸ್ತಿ. ಮನದ ಅಜ್ಞಾನ ಪರಿಹರಿಸಿ, ಗುರು ಬೋಧನೆಯ ಬೆಳಕು ಬೀರಿ ಬದುಕನ್ನು ಪೂರ್ಣ ಸತ್ಪಥದತ್ತ ಕರೆದೊಯುವಾತನೆ ನಿಜವಾದ ಗುರುನಾಥ ಎಂಬುದನ್ನು ಮರೆಯಬಾರದು. ನಮ್ಮ ಶಾಖಾಮಠವು ಕಳೆದ 24 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಸಮರ್ಥವಾಗಿ ಯಶಸ್ವಿಗೊಳಿಸುತ್ತಾ ಬಂದಿದೆ. ಈ ಕರಡಕಲ್ ಕ್ಷೇತ್ರ ಮುಂದೊಂದು ದಿನ ಕೈಲಾಸವಾಗಲಿದೆ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಮಠದ ಪೀಠಾಧಿಪತಿ ಶಾಂತರುದ್ರಮುನಿ ಮಹಾಸ್ವಾಮಿಗಳು ವಹಿಸಿದ್ದರು. ಕಡಕೋಳ ರುದ್ರಮುನಿ ಶಿವಾಚಾರ್ಯರು, ಗುರುಮಿಠಕಲ್ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು, ಕೊಡೆಕಲ್ ಶಿವಕುಮಾರ ಸ್ವಾಮಿಗಳು, ಕೆಂಭಾವಿ ಚನ್ನಬಸವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ರಾಜುಗೌಡ ಪಾಟೀಲ ಸಾಲವಾಡಗಿ, ರಾಜಾ ಸಂತೋಷ ನಾಯಕ, ಶಿವಾನಂದ ಕೆಲ್ಲೂರ, ಕಾಂತುಗೌಡ ಮದ್ದರಕಿ, ರಾಮುನಾಯಕ, ಸೂಗುರೇಶ ವಾರದ, ಸಿದ್ದನಗೌಡ ಹುರಸಗುಂಡಗಿ, ವಿಶ್ವನಾಥರೆಡ್ಡಿ ನಾಡಗೌಡ, ಪಂಚಾಕ್ಷರಿ ಶೆಳ್ಳಗಿ, ಮಲ್ಲಿಕಾರ್ಜುನ ಯಡಹಳ್ಳಿ, ಡಾ.ನಂದಗಿರಿ ವೇದಿಕೆ ಮೇಲಿದ್ದರು.
ಕರಡಕಲ್ ಕ್ಷೇತ್ರವು ಈ ಭಾಗದ ಭಕ್ತರ ಶೃದ್ಧಾ ಭಕ್ತಿಯ ಕೇಂದ್ರವಾಗಿದೆ. ಮಠದ ಪೂಜ್ಯರು ಅನುಷ್ಠಾನ ಮೂರ್ತಿಗಳಾಗಿ ಈ ಭಾಗದ ಭಕ್ತರನ್ನು ಹರಸಿ ಆರ್ಶೀವದಿಸುತ್ತಿರುವದು ನಮ್ಮೆಲ್ಲರ ಭಾಗ್ಯ.
ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಶಾಸಕರು ಯಾದಗಿರಿ.
ಕರಡಕಲ್ ಶ್ರೀ ಮಠವು ನೊಂದು ಬೆಂದವರಿಗೆ ಸಾಂತ್ವನ ನೀಡಿ ಆರ್ಶೀವಚಿಸುವ ಮಹಾಕ್ಷೇತ್ರ. ನಾನು ಪೂಜ್ಯರ ಆರ್ಶೀವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದೆನೆ. ನಾನು ನಿಮ್ಮಂತೆ ಭಕ್ತನಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದೆನೆ.
ರಾಜುಗೌಡ ಪಾಟೀಲ ಕುದರಿಸಾಲವಡಗಿ, ಶಾಸಕರು ದೇ.ಹಿಪ್ಪರಗಿ