ಅಂಬೇಡ್ಕರ್ ಭವನಕ್ಕೆ ಪರ್ಯಾಯ ಜಾಗ ಶೀಘ್ರ ಮಂಜೂರು:ಶಾಸಕ ಯತ್ನಾಳ ಭರವಸೆಸರದಿ ಉಪವಾಸ ಅಂತ್ಯ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.19: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ 29ನೇ ದಿನ ಹಾಗೂ 7ನೇ ದಿನ ಸರದಿ ಉಪವಾಸ ಸತ್ಯಾಗ್ರಹ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿದ ಭರವಸೆ ಮೇರೆಗೆ ಅಂತ್ಯಗೊಂಡಿದೆ.
ಶಾಸಕ ಯತ್ನಾಳ ಅವರು ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಉಪವಾಸ ನಿರತರಿಗೆ ಎಳನೀರು ಕುಡಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರು ತಮ್ಮ ಧರಣಿ ಸತ್ಯಾಗ್ರಹ ಹಾಗೂ ಸರದಿ ಉಪವಾಸವನ್ನು ಮುಕ್ತಾಯಗೊಳಿಸಿದರು.
ಮಂಗಳವಾರ ಧರಣಿ ಉಪವಾಸ ಕೈಗೊಂಡಿದ್ದ ಹೋರಾಟಗಾರರಾದ ಪ್ರಕಾಶ ಚಲವಾದಿ, ಚಿಕ್ಕಯ್ಯ ಚಲವಾದಿ, ಶ್ರೀಶೈಲ ಕಾಖಂಡಕಿ, ಬಸವರಾಜ ಕಾಖಂಡಕಿ, ಮಲ್ಲಿಕಾರ್ಜುನ ಸಾವಳಗಿ, ಸಚಿನ ಕಾಖಂಡಕಿ ಅವರು ನಿರಶನ ಕೈ ಬಿಟ್ಟರು.
ಈ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿ, ವಿಜಯಪುರ ನಗರದ ಸಿಟಿಎಸ್ ನಂಬರ್ 605ರಲ್ಲಿ ತಲೆತಲಾಂತರದಿಂದ ದಲಿತ ಸಮುದಾಯದ ಜನರು ವಾಸ ಮಾಡುತ್ತಿದ್ದು, ಇದೇ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಿಸಲು ಸಮಾಜಕಲ್ಯಾಣ ಹೆಸರಿನಲ್ಲಿ ಜಾಗವೂ ಮಂಜೂರಾಗಿ ನಮ್ಮ ಅನುದಾನದಲ್ಲಿ 20 ಲಕ್ಷ ರೂ.ಗಳನ್ನು ಕಾಯ್ದಿರಿಸಿದ್ದು ಸದ್ಯ ಟೆಂಡರ್ ಪ್ರಕ್ರಿಯೆ ಕೂಡಾ ಮುಗಿದಿದ್ದು ಏಕಾಏಕಿ ಅನ್ಯಕೋಮಿನ ಜನ ಅಂಬೇಡ್ಕರ್ ಭವನ ನಿರ್ಮಾಣವನ್ನು ತಡೆಗಟ್ಟುವಂತೆ ವಕ್ಫಕೋರ್ಟಿನಲ್ಲಿ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದು ಇದು ಅವg Àಅಂಬೇಡ್ಕರ್ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಅವರು ಯಾರು ಎಷ್ಟೇ ತಡೆಯಾಜ್ಞೆ ತಂದರೂ ಕೂಡಾ ಉಚ್ಛನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯದವರೆಗೆ ಸ್ವತಃ ನಾನೇ ಕಾನೂನು ಹೋರಾಟ ಮಾಡಿ ನೊಂದ ದಲಿತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಾಗೂ ಭೂ ಮಾಪನ ಇಲಾಖೆ ಸಿಬ್ಬಂದಿ ಮತ್ತು ಹೋರಾಟಗಾರರೊಂದಿಗೆ ಸಭೆ ನಡೆಸಿದ ಶಾಸಕರು, ಅಂಬೇಡ್ಕರ್ ಭವನ ನಿರ್ಮಿಸಲು ಸಿಟಿಎಸ್ 605 ರಲ್ಲಿ ಕಾನೂನಿನ ತೊಡಕು ಉಂಟಾಗಿರುವುದರಿಂದ ಪರ್ಯಾಯವಾಗಿ ಮನಗೂಳಿ ಅಗಸಿ ಹೊರಗಡೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಜಾಗೆ ಇದ್ದುಅದರಲ್ಲಿ 100 ಘಿ 100 ಜಾಗವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ಮನಗೂಳಿ ಅಗಸಿ ಬಡಾವಣೆಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘಕ್ಕೆ ಶೀಘ್ರದಲ್ಲಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಅದಕ್ಕೆ ತಗಲುವ ಖರ್ಚುವೆಚ್ಚವನ್ನು ಶಾಸಕರ ನಿಧಿಯಿಂದ ಭರಿಸಿ ಸುಸಜ್ಜಿತವಾದ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸುವುದಲ್ಲದೇ ಸಿಟಿಎಸ್ 605 ರಲ್ಲಿನ ಕಾನೂನಿನ ತೊಡಕನ್ನು ಪರಿಹರಿಸಿ ಮನಗೂಳಿ ಅಗಸಿ ದಲಿತ ಜನಾಂಗಕ್ಕೆ ನಿವೇಶನ ಹಂಚಿಕೆ ಮಾಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸುಸಜ್ಜಿತವಾದ ವಸತಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೋರಾಟಗಾರ ಪ್ರತಾಪ ಚಿಕ್ಕಲಕಿ ಅವರು ಮನಗೂಳಿ ಅಗಸಿ ಬಡಾವಣೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳುವ ಮೂಲಕ ನ್ಯಾಯ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟಿ, ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ, ಬಿಜೆಪಿ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ಮುಖಂಡರಾದ ಮಡಿವಾಳ ಯಾಳವಾರ, ದಾದಾಸಾಹೇಬ ಬಾಗಾಯತ, ರಾಜಶೇಖರ ಬಜಂತ್ರಿ, ಆನಂದ ಜೌಧರಿ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ಉಪಾಧ್ಯಕ್ಷ ಕೀರ್ತಿಕಾಖಂಡಕಿ, ಕಾರ್ಯದರ್ಶಿ ಮಂಜುನಾಥ ಶಿವಶರಣ, ದಲಿತ ಮುಖಂಡರಾದ ಬಸವಕುಮಾರ ಕಾಂಬಳೆ, ಬಸವರಾಜ ಕುಬಕಡ್ಡಿ, ಅರವಿಂದ ಕಾಖಂಡಕಿ, ರೋಹಿತ ಮಲಕಣ್ಣನವರ, ರಾಮಣ್ಣ ಸಿದ್ದರಡ್ಡಿ, ರಾಜು ಕಾಖಂಡಕಿ, ಬಾಬು ಶಿವಶರಣ, ರವಿ ಕಾಖಂಡಕಿ, ಆಕಾಶ ಕಾಂಬಳೆ, ಆಕಾಶ ಕಾಖಂಡಕಿ, ಕೃμÁ್ಣ ಚಲವಾದಿ, ಮಹೇಶ ಚಲವಾದಿ, ಚೇತನ ಜವಳಗಿ, ಜಗದೀಶ ಕೂಡಗಿ, ಆಕಾಶ ಚಲವಾದಿ, ಸನ್ನಿ ಕಾಖಂಡಕಿ, ಸುಭಾಸ ವಾಲೀಕಾರ, ಮರೆಪ್ಪ ಖಜಾಪೂರ, ಸುಧಾ ಚಲವಾದಿ, ಆಶಾ ಮಾನೆ, ಮಲ್ಲಮ್ಮ ಚಲವಾದಿ, ಸುನಂದಾ ಕಾಖಂಡಕಿ, ಮಲ್ಲಮ್ಮ ಚಲವಾದಿ, ಸುನಂದಾ ಕಾಖಂಡಕಿ, ಕಸ್ತೂರಿಬಾಯಿ ಕಾಂಬಳೆ, ಶೆಟ್ಟೆವ್ವ ಕಾಖಂಡಕಿ, ಗೀತಾ ಚಲವಾದಿ, ರಂಜನಾ ಕಾಂಬಳೆ, ಸರೋಜಾ ಕುಬಕಡ್ಡಿ, ಕಸ್ತೂರಿ ಕಾಳೆ, ಮಧು ಕಾಖಂಡಕಿ, ಗೀತಾ ವಾಲೀಕಾರ, ಪಮ್ಮಕ್ಕ ವಾಲೀಕಾರ, ಮೀನಾಕ್ಷಿ ಕಾಖಂಡಕಿ, ಶಿವರಾಜ ಸಾಣಕರ, ಅರುಣ ಬನಸೋಡೆ, ಶಿವಾನಂದ ಕಾಖಂಡಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.