ರೇಣುಕಾಸ್ವಾಮಿ ಪ್ರಕರಣ: ಇಬ್ಬರೂ ಆರೋಪಿಗಳ ಸ್ಥಳ ಮಹಜರು
ಸಂಜೆವಾಣಿ ನ್ಯೂಸ್
ಮೈಸೂರು: ಜೂ.19:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮೈಸೂರಿಗೆ ಇಬ್ಬರು ಆರೋಪಿಗಳನ್ನ ಕರತೆಂದು ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ಥಳ ಮಹಜರು ನಡೆಸಿದರು.
ಮಾಹಿತಿಯ ಪ್ರಕಾರ ಎ11 ನಾಗರಾಜ್ ಎ12 ಲಕ್ಷ್ಮಣ್ ನನ್ನ ಪೆÇಲೀಸರು ಮೈಸೂರಿಗೆ ಕರೆತಂದಿದ್ದು ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ಥಳ ಮಹಜರು ನಡೆಸಿದರು ಎಂಬ ಮಾಹಿತಿ ಲಭ್ಯವಾಗಿದೆ. ನಾಗರಾಜ್ ದರ್ಶನ್ ಮ್ಯಾನೇಜರ್ ಆಗಿದ್ದು, ಲಕ್ಷ್ಮಣ್ ಕಾರು ಚಾಲಕನಾಗಿದ್ದಾನೆ. ಹೋಟೆಲ್ ನಲ್ಲಿರುವ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ನಂತರ ಆರೋಪಿಗಳು ರಾಡಿಸನ್ ಹೋಟೆಲ್ ನಲ್ಲಿ ಮೀಟಿಂಗ್ ನಡೆಸಿದ್ದರು ಎನ್ನಲಾಗಿದೆ. ನಟ ದರ್ಶನ್ ಡೆವಿಲ್ ಶೂಟಿಂಗ್ ಗಾಗಿ ರಾಡಿಸನ್ ಹೋಟೆಲ್ ನಲ್ಲಿ ತಂಗಿದ್ದರು.