ಸುರಕ್ಷತೆ ಬಳ್ಳಾರಿಗಾಗಿತೂಕ ಇಳಿಸಿಕೊಂಡ ಪೊಲೀಸರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ದೇಹದ ತೂಕ ಹೆಚ್ಚಿಸಿಕೊಂಡಿರುವ 40 ಜನ
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 21 ದಿನದಲ್ಲಿ 4 ರಿಂದ 9 ಕಿಲೋ ತೂಕ ಕಡಿಮೆ ಮಾಡಲಾಗಿದೆ.
ಇದಕ್ಕಾಗಿ ಪೊಲೀಸ್ ಇಲಾಖೆಯಿಂದಲೇ “ಸುರಕ್ಷತೆ ಬಳ್ಳಾರಿಗಾಗಿ ಸದೃಡ ಪೊಲೀಸ್” ಎಂಬ ಯೋಜನೆ ಯಡಿಯಲ್ಲಿ ಬಿ.ಎಂ.ಐ ಹೆಚ್ಚಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಳೆದ ಮೇ ರಿಂದ ಜೂನ್ 18 ರ ವರೆಗೆ 21 ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಾಗಾರಕ್ಕೆ 40 ಜನರನ್ನು ಆಯ್ಕೆಮಾಡಿಕೊಂಡು ಅವರಿಗೆ ಡಿ.ಎ.ಆರ್. ಬಳ್ಳಾರಿಯಲ್ಲಿ ವಸತಿ ಊಟದ ವ್ಯವಸ್ಥೆಯನ್ನು ಮಾಡಿತ್ತು. ಪ್ರತಿದಿನ ಮುಂಜಾನೆ ರನ್ನಿಂಗ್, ವಾಕಿಂಗ್, ಯೋಗ, ಏರೋಬಿಕ್ಸ್, ಧಾನ್ಯ ಈಜೂ, ತರಬೇತಿಯನ್ನು ನೀಡಿದೆ, ಬಳ್ಳಾರಿ ಹಾಗು ಸಂಡೂರಿನ ಗುಡ್ಡಕ್ಕೆ ಟ್ರಕಿಂಗ್ ಸಹ ಮಾಡಿಸಲಾಗಿದೆ.
ಜೊತೆಗೆ ವೈದ್ಯರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವ ಜೀವನ ಕ್ರಮವನ್ನು ಅನುಸರಿಸಲು, ಬೆನ್ನುನೋವು, ಮೋಣಕಾಲು ನೋವು ಇವುಗಳ ಬಗ್ಗೆ ತಿಳುವಳಿಕೆನ್ನು ನೀಡಲಾಗಿದೆ, ಆಹಾರ ಪರಿಣಿತರನ್ನು ಕರೆಯಿಸಿ ದೈನಂದಿನ ಜೀವನದಲ್ಲಿ ಅಳವಡಿಸಬೇಕಾಗಿರುವ ಆಹಾರ ಕ್ರಮದ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಅದರ ಪ್ರಕಾರವೇ ಊಟ ತಿಂಡಿ ನೀಡಿದೆ. ಕಾನೂನು ತಿಳುವಳಿಕೆ, ಸಾರ್ವಜನಿಕರಿಗೆ ಸಂಚಾರದ ಬಗ್ಗೆ ಅರಿವು ಮೂಡಿಸುವುದು, ಗಿಡಗಳನ್ನು ನೆಡುವುದು. ಕೆಲಸಗಳನ್ನು ಮಾಡಿಸಲಾಗಿದೆ.
ತರಬೇತಿಯ ಕೊನೆಯಲ್ಲಿ 9 ಕೆ.ಜಿ ಯಿಂದ 4 ಕೆಜಿ ಯ ವರೆಗೆ ತೂಕವನ್ನು ಕಡಿಮೆ ಮಾಡಿಕೊಂಡಿರುತ್ತಾರೆ.
ಇನ್ನಿತರೆ ಬಿಐಎಂ‌ ಹೆಚ್ಚಾಗಿರುವ ಸಿಬ್ಬಂದಿಗೆ ಈ ಕಾರ್ಯಾಗಾರವನ್ನು ಮುಂದುವರೆಸಲಾಗುತ್ತದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದ್ದಾರೆ.