ನಾಗನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕಲಬುರಗಿ,ಜೂ.18-ನಂದಿಕೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಯಾಮ್ ಜಿಯೋಸ್ ಪ್ಯಾಲೇಟಿವ್ ಕೇರ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿ, ಗ್ರಾಮಸ್ಥರು ಉಚಿತ ಆರೋಗ್ಯ ಶಿಬಿರದ ಲಾಭ ಪಡೆದುಕೊಳ್ಳಬೇಕು. ನಂದಿಕೂರ್ ಗ್ರಾಮದ 74 ಜನರು ಸೀತನೂರ್ ಗ್ರಾಮದ 66ಜನರು ಉದನೂರ್ ಗ್ರಾಮದ 57 ಜನರಿಗೆ ಮಧುಮೇಹ, ರಕ್ತ ಒತ್ತಡ, ಬಾಡಿ ಟೆಂಪರೇಚರ್, ಇಸಿಜಿ ತಪಾಸಣೆ ಮಾಡಲಾಗಿದೆ.
Àಕಾಂಗ್ರೆಸ್ ಮುಖಂಡರಾದ ನೀಲಕಂಠರಾವ್ ಮುಲಗೆ, ಪವನಕುಮಾರ್ ಬಿ ವಳಕೇರಿ, ಸಂಗಮೇಶ್ ನಾಗನಹಳ್ಳಿ, ಮಲ್ಲಿನಾಥ್ ಇಟಗಿ, ನಾಗೇಂದ್ರ ಶರ್ಮ, ಕುಪೇಂದ್ರ ವರ್ಮ, ಶರಣು ಸುಬೇದಾರ್, ಶರಣು ಕರೆಕಲ್, ಭೀಮಶಂಕರ್ ನಂದಿಕೂರ್, ಶಿವಕುಮಾರ್ ಬಿರಾದಾರ್, ಹುಸನಯ್ಯ ಗುತ್ತೇದಾರ್, ಪ್ರಕಾಶ್ ನಾಗನಹಳ್ಳಿ, ಗ್ರಾಮ ಪಂಚಾಯತಿ ಅಧ್ಯಕ್ಷÀ ಚಂದಕಾಂತ ಕೆ ಪೂಜಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.