ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬೈಕ್‍ಗೆ ಹಗ್ಗಕಟ್ಟಿ ಎಳೆದು ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ
ವಿಜಯಪುರ,ಜೂ.18: ರಾಜ್ಯ ಕಾಂಗ್ರೆಸ್ ಸರ್ಕಾರÀ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹೇರಿದ್ದು ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೂ ಬೈಕ್‍ಗೆ ಹಗ್ಗಕಟ್ಟಿ ಎಳೆದುಕೊಂಡು ಬರುವ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ಉಪಾಧ್ಯಕ್ಷÀ ವಿವೇಕಾನಂದ ಡಬ್ಬಿ ಮಾತನಾಡಿ, ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನವಿರೋಧಿ ಎಂದೂ ಕಂಡಿಲ್ಲ. ಸುಳ್ಳು ಭರವಸೆ ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೂಡಲೇ ಪೆಟ್ರೋಲ್, ಡಿಸೇಲ್ ಏರಿಕೆಯನ್ನು ಕಡಿತಗೊಳಿಸಿ ಈ ನಿರ್ಧಾರವನ್ನು ಹಿಂಪಡೆಯಬೇಕು.
ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕÀ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಿಲ್ಲದಿದ್ದರೆ, ಈ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ, ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಮೂಲಕ ನಾವು ಸರ್ಕಾರ ನಡೆಸುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್ಸಿಗರು ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆÉ. ಇದನ್ನು ನೋಡಿಕೊಂಡು ಬಿಜೆಪಿ, ಕೈಕಟ್ಟಿ ಕೂರಲು ಸಾಧ್ಯವಿಲ್ಲ, ನಿಮ್ಮ ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ ಹಾಗೂ ಮಧ್ಯಮ ವರ್ಗಗಳ ವಿರೋಧಿ ಆಡಳಿತ ಕೊನೆಯಾಗುವವರೆಗೆ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ. ಪೆಟ್ರೋಲ್, ಡಿಸೇಲ್ ದರ ಏರಿಕೆಯ ಹಿನ್ನೆಲೆಯಲ್ಲಿ ಕೇವಲ ವಾಹನ ಸವಾರರಿಗೆ ಮಾತ್ರ ಹೊರೆಯಾಗುವುದಿಲ್ಲ, ಇದು ಸರಕು ಸಾಗಾಣಿಕೆಯ ಮೇಲೆ ಪರಿಣಾಮ ಬೀರಲಿದೆ. ಪ್ರಯಾಣದ ದರವನ್ನು ಹೆಚ್ಚಿಸಲಿದೆ. ತನ್ಮೂಲಕ ತರಕಾರಿಗಳ ಬೆಲೆ, ದಿನನಿತ್ಯ ಗೃಹಬಳಕೆ ವಸ್ತುಗಳ ಬೆಲೆ,ದವಸ ಧಾನ್ಯಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಾಗಲಿದೆ, ಇದು ಇಡೀ ಕರುನಾಡ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಸರ್ವಾಧಿಕಾರಿ ನಿರ್ಧಾರವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಪೆಟ್ರೋಲ್ ಬೆಲೆ ಲಿಟರ್ ಗೆ 3 ರೂ. ಡಿಸೇಲ್ ಬೆಲೆ 3.5 ರೂ ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಬೆಲೆ ಏರಿಕೆ ದರ ಹಿಂಪಡೆಯುವವರೆಗೂ ಬಿಜೆಪಿ ಹೋರಾಟ ನಿರಂತರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರದ ಮಂಡಲ ಅಧ್ಯಕ್ಷÀ ಶಂಕರ ಹೂಗಾರ ಮಾತನಾಡಿ, 18 ರಿಂದ 19 ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೆಸ್ ಮುಖಂಡರು ಇಟ್ಟುಕೊಂಡಿದ್ದರು, ಅವರು ಈಗ ಹತಾಶರಾಗಿ ಬೆಲೆ ಏರಿಕೆಗೆ ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಮೀಸೆ, ಇಂಡಿಯ ಕಾಸುಗೌಡ ಬಿರಾದಾರ, ಗುರಲಿಂಗಪ್ಪ ಅಂಗಡಿ, ಸ್ವಪ್ನಾ ಕಣಮುಚನಾಳ ಮಾತನಾಡಿದರು.
ಈ ವೇಳೆ ಜನತಾ ಪಾರ್ಟಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವುರ, ಪ್ರಭುಗೌಡ ಅಸ್ಕಿ, ಸಿದ್ದು ಬುಳ್ಳಾ, ಸುರೇಶ ಬಿರಾದಾರ, ಚಿದಾನಂದ ಚಲವಾದಿ, ಶ್ರೀನಿವಾಸ ಕಂದಗಲ, ಅನೀಲ ಉಪ್ಪಾರ, ಮಹೇಂದ್ರ ನಾಯಕ, ರಾಜಕುಮಾರ ಸಗಾಯಿ, ಗೂಳಪ್ಪ ಶಟಗಾರ, ಶರಣು ಕಾಖಂಡಕಿ, ಸಂತೋಷ ಪಾಟೀಲ ಡಂಬಳ, ರಾಕೇಶ ಕುಲಕರ್ಣಿ, ಮಲ್ಲಿಕಾರ್ಜುನ ಕಿವಡೆ, ವಿಜಯ ಜೋಶಿ, ಶಂಕರಗೌಡ ಪಾಟೀಲ, ಕಾಂತು ಶಿಂಧೆ, ಜಗದೀಶ ಮುಚ್ಚಂಡಿ, ಪಾಪುಸಿಂಗ್ ರಜಪೂತ, ವಿಕಾಸ ಪದಕಿ, ಶರಣಬಸು ಕುಂಬಾರ, ರಾಜೇಶ ತವಸೆ, ಆನಂದ ಮುಚ್ಚಂಡಿ, ಶಿವಾನಂದ ಮಕಣಾಪೂರ, ಗುರು ತಳವಾರ, ರಾಘು ಕಾಪ್ಸೆ, ಶೀತಲಕುಮಾರ ಓಗಿ, ಶೀಲವಂತ ಉಮರಾಣಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜುನ ಗಡಗಿ, ಮಹೇಶ ಒಡೆಯರ ಮತ್ತು ಪ್ರವೀಣ ಕೂಡಗಿ, ವಿಠ್ಠಲ ನಡುವಿನಕೇರಿ, ಪ್ರಕಾಶ ಚವ್ಹಾಣ, ದತ್ತಾ ಗೋಲಾಂಡೆ, ರಾಹುಲ್ ಆಪ್ಟೆ, ಪ್ರವೀಣ ವಂದಾಲಮಠ, ಸಂತೋಷ ಭೋವಿ, ಸಂತೋಷ ಕುರದಡ್ಡಿ, ವಿನೋದ ಪತ್ತಾರ, ಸಂಗಮೇಶ ಉಕ್ಕಲಿ, ಅನೀಲ ಉಪ್ಪಾರ, ಸಂತೋಷ ನಿಂಬರಗಿ, ಸುಚೀತಾ ಜಾಧವ, ಮಧು ಪಾಟೀಲ, ಸುವರ್ಣ ಕುರ್ಲೆ, ಈರಣ್ಣ ಶಿರಮಗೊಂಡ, ಆನಂದ, ರಾಚು ಬಿರಾದಾರ, ಈರಣ್ಣಾ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.