ರಾಜ್ಯ ಮಟ್ಟಕ್ಕೆ ಶೋಭಾ ಆಯ್ಕೆ
ಕಲಬುರಗಿ,ಸೆ.25-ಜಿಲ್ಲೆಯ ಚಿಂಚೋಳಿ ತಾಲೂಕಿನ ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಶೋಭಾ ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದ ಜಾವಲಿನ್ ಥ್ರೊ ಸ್ಪರ್ಧೆಯಲ್ಲಿ (ಪ್ರೌಢ ಶಾಲಾ ವಿಭಾಗ) ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್, ದೈಹಿಕ ಶಿಕ್ಷಣ ಶಿಕ್ಷಕರಾದ ತುಕಾರಾಮ ಚವ್ಹಾಣ, ಶಿಕ್ಷಕರಾದ ಶಿವಾನಂದ ಬೀಳಗಿ,ನಾಗಶೆಟ್ಟಿ,ಗೋಪಾಲದಾಸ, ಅಶೋಕ ಹಡಪದ, ಸಿದ್ದಯ್ಯ ಹಿರೇಮಠ, ರೇಖಾ, ಮಹಾನಂದ, ಕವಿತಾ, ಮಹೇಶ, ಬಸವರಾಜ, ಭಾಗ್ಯಜ್ಯೋತಿ, ವಾರ್ಡನ್ ಶಿವಕುಮಾರ ಹಿರೇಮಠ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.