ಪೋಷಕಾಂಶ ಸೇವನೆಯಿಂದ ಉತ್ತಮ ಆರೋಗ್ಯ: ಬೌದ್ಧ ಭಿಕ್ಕು
ವಾಡಿ:ಸೆ.25: ಪ್ರತಿನಿತ್ಯ ದೈನಂದಿನ ಜೀವನದಲ್ಲಿ ಪೆÇೀಷಕಾಂಶಯುಳ್ಳ ಪದಾರ್ಥಗಳು ಸೇವನೆ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸಬಹುದಾಗಿದೆ ಎಂದು ಬೌದ್ಧ ಭಿಕ್ಕು ಪೂಜ್ಯ ಅರ್ಚಸ್ಮತಿ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ಕಾಲೋನಿಯ ಸಿದ್ದಾರ್ಥ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೆÇೀಷಣಾ ಅಭಿಯಾನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪೆÇೀಷಣಾ ಮಾಸಾಚರಣೆ, ಗರ್ಭಿಣಿ ಬಾಣಂತಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮಗಳು ಗಣನೀಯವಾಗಿದೆ ಎಂದರು.
ಪೆÇೀಷಣ ಅಭಿಯಾನದ ತಾಲೂಕು ಸಂಯೋಜಕಿ ರೇಖಾ ಬಿ. ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಪೆÇೀಷಣಾ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮ ವಾಗಿದ್ದು, ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ರಮವಾಗಿದೆ. ಮಹಿಳೆಯರು ಪೆÇೀಷಣಾ ಅಭಿಯಾನದಡಿ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರ ಪ್ರಾಥಮಿಕ ಆರೋಗ್ಯ ಅಧಿಕಾರಿ ಡಾ.ವಿಕ್ರಂ ಗೌನಳ್ಳಿ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ, ಪುರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ನೋಡಲ್ ಇಂಜಿನಿಯರ್ ಮನೋಜಕುಮಾರ ಹಿರೋಳ್ಳಿ, ಮುಖಂಡರಾದ ಶಿವಪ್ಪ ಮುಂಡರಗಿ, ನಾಗೇಂದ್ರ ಜೈ ಗಂಗಾ, ಅಂಗನವಾಡಿ ಮೆಲ್ವಿಚಾರಕರಾದ ನಾಗಮ್ಮ ಸಂಗಶೆಟ್ಟಿ, ಮೀನಾಕ್ಷಿ ಗುಂಡಗುರ್ತಿ, ಅಂಗನವಾಡಿ ಕಾರ್ಯಕರ್ತೆರಾದ ಶಾಂತಾ ಹಿರೇಮಠ, ಲಕ್ಷ್ಮೀ ರಾಠೋಡ ಸೇರಿದಂತೆ ಗರ್ಭಿಣಿ ಮಹಿಳೆಯರು ಭಾಗವಹಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಕುಲಕರ್ಣಿ ಇದ್ದರು.