ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಅಳಂದ ಸೆ.25: ಇಲ್ಲಿನ ತಹಶೀಲ್ ಕಚೇರಿಯಲ್ಲಿ ಲೋಕಾಯುಕ್ತರಿಂದ ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್‍ಪಿ ಬಿ .ಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಅರ್ಜಿ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ. ಗೀತಾ ಬೇನಾಳ ಅವರು ಸಾರ್ವಜನಿಕರಿಂದ ಬಂದ ಅರ್ಜಿಗಳಿಗೆ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಾಲೂಕ ಎಲ್ಲಾ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು
ಸರ್ಕಾರದಿಂದ ಪಿಂಚಣಿ ಹಣ ಬರಬೇಕಿತ್ತು . ಎರಡು ವರ್ಷಗಳ ಕಾಲದಿಂದ ಹಣ ಬರ್ತಾ ಇಲ್ಲ ಎಂದು ಪಿರುಬಾಯಿ ಎಂಬ ಮಹಿಳೆ ದೂರಿದರು.
ಸರ್ವೆ ಇಲಾಖೆಯವರು ಯಾರದೊ ಹೊಲ ಯಾರ ಹೆಸರು ಮೇಲೆ ಸರ್ವೇ ಮಾಡ್ತಾರೆ. ನಮಗೆ ಸರ್ವೆ ಮಾಡುವಾಗ ಯಾವುದೇ ನೋಟೀಸ್ ನೀಡಿರುವುದಿಲ್ಲ. ಮನಸ್ಸಿಗೆ ಬಂದಂತೆ. ಸರ್ವೆ ಇಲಾಖೆಯವರು ಅವರು ಕೆಲಸ ಮಾಡುತ್ತಾರೆ ಎಂದು ಗುಂಜು ಬಬಲಾದ ಗ್ರಾಮದ ತಮ್ಮರಾಯ ಪಾಟೀಲ್ ದೂರಿದರು.
ಚಂದ್ರಕಾಂತ್ ಹಿರಳ್ಳಿ ಎಂಬುವವರು ಗ್ರಾಮದ ಹೊಲದ ಪಹಣಿಯಲ್ಲಿ ಬೇರೆ ಬೇರೆ ಹೆಸರು ಸೇರಿಸಿದ್ದಾರೆ ಎಂದು ಹೇಳಿದರು.
ಲಂಚ ಸ್ವೀಕರಿಸಿ ಕೆಲಸ ಮಾಡಿದರೆ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್,ಬಸವರಾಜ್, ಮಲ್ಲಿನಾಥ್,ಪೌಡಪ್ಪ, ಪ್ರಮೋದ್ ಸಿಬ್ಬಂದಿಗಳು ಉಪಸ್ಥಿತರಿದ್ದರು.