ಧೋತ್ತರಗಾಂವ ವೀರೇಶ್ವರ ಪುರಾಣ ಮಹಾಮಂಗಲ ಮಹೋತ್ಸವ
ಕಲಬುರಗಿ,ಸೆ 24: ಅಳಂದ ತಾಲೂಕಿನ ಧೋತ್ತರಗಾಂವ ಗ್ರಾಮದಲ್ಲಿ ಸೆ. 26 ಮತ್ತು 27 ರಂದು ಶಿವಾನುಭವಗೋಷ್ಠಿ ,ಮಹಾಪ್ರಸಾದ ಮತ್ತು ವೀರೇಶ್ವರ ಪುರಾಣ ಮಹಾಮಂಗಲ ಮಹೋತ್ಸವ ನಡೆಯಲಿದೆ.
26 ರಂದು ಮುಂಜಾನೆ 10 ಕ್ಕೆ ಶಿವಾನುಭವಗೋಷ್ಠಿ ನಡೆಯಲಿದ್ದು,ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಸಾನಿಧ್ಯ ವಹಿಸುವರು.ಮಲಕೂಡ ಗುರುಲಿಂಗ ಶಿವಾಚಾರ್ಯರು,ಕಡಗಂಚಿ ಕಟ್ಟಿಮಠದ ವೀರಭದ್ರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು,ಅಧಿಕಾರಿಗಳು ಪಾಲ್ಗೊಳ್ಳುವರು. ಮಧ್ಯಾಹ್ನ 1.3ಂ ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ
ಸೆ 27 ರಂದು ವೀರೇಶ್ವರ ಪುರಾಣ ಮಹಾಮಂಗಲ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 9 ಗಂಟೆಗೆ ವೀರೇಶ್ವರ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವದು ಎಂದು ವೀರೇಶ್ವರ ದೇವಸ್ಥಾನ ಸೇವಾ ಸಮಿತಿ ಮತ್ತು ಸಕಲ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.