ಭಾಗೀರಥಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು
ಅಥಣಿ :ಸೆ.25: ಇಂದು ಬೆಳಗಿನ ಜಾವ ದೇವರ ದರ್ಶನಕ್ಕೆ ತೆರಳುವಾಗ ಹಳ್ಳ ದಾಟುವ ವೇಳೆ ತುಂಬಿ ಹರಿಯುತ್ತಿರುವ ಭಾಗೀರಥಿ ಹಳ್ಳದ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ ಕೊಚ್ಚಿ ಹೋಗಿ ಪಟ್ಟಣದ ಹನುಮಾನ ಅಗಸಿ ಹತ್ತಿರ ಇರುವ ಆಜಾದ್ ಸರ್ಕಲ್ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ
ಪಟ್ಟಣದ ನಿವಾಸಿ ಗುರುರಾಜ ಈರಪ್ಪ ಯಾದವಾಡ (75) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ದುರ್ಘಟನೆ ಅಥಣಿ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.