ಸಮಾಜ ಕಾರ್ಯಗಳಲ್ಲಿ ತೊಡಗಲಿ : ಡಾ.ಪಾಟೀಲ
ಕಲಬುರಗಿ:ಜೂ.18: ಶೈಕ್ಷಣಿಕ ಸಾಧನೆಯಲ್ಲಿ ಪ್ರಾಥಮಿಕ,ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮೂವತ್ತು ವರ್ಷಗಳ ಕಾಲ ಅವಿರತ ನಿಸ್ವಾರ್ಥ ಸೇವೆ ಸಲ್ಲಿಸಿ ತಮ್ಮ ಪ್ರಾಚಾರ್ಯ ಹುದ್ದೆಯಿಂದ ನಿವೃತ್ತರಾದ ರಾಜಪ್ಪ ಗೊನ್ನಳ್ಳಿ ಅವರ ಸೇವೆ ಅಪಾರವೆಂದು ಸಾಹಿ ತಿ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಹೇಳಿದರು.
ಘಾಟಗೆ ಲೇ ಔಟ್ದ್‍ದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಿದ್ದಾರ್ಥ ಬುದ್ಧ ಗ್ರಂಥಾಲಯದಿಂದ ಇತ್ತೀಚಿಗೆ ನಿವೃತ್ತಿ ಹೊಂದಿದ ನಿಮಿತ್ಯ ರಾಜಪ್ಪ ಅವರು ಬಹುಮುಖವಾ ದ ವ್ಯಕ್ತಿತ್ವ. ಅವರು ಸಮಾಜ,ಬೌದ್ಧ ಧಮ್ಮ ವಿಚಾರ, ಅಂಬೇಡ್ಕರ್ ವಿಚಾರಧಾರೆಗಳನ್ನು ಪಸರಿಸಿದವರು ಅವರ ನಿವೃತ್ತ ಜೀವನ ಹೊಂದಿದರು. ಸಮಾಜದ ಕಾರ್ಯಗಳಲ್ಲಿ ತೊಡಗಲಿ ಎಂದರು.
ಸನ್ಮಾನ ಸ್ವೀಕರಿಸಿ ರಾಜಪ್ಪ ಗೌನಳ್ಳಿ ಅವರು ಮಾತನಾಡಿ ಬಹಳ ಕಷ್ಟ ಜೀವನದಲ್ಲಿ ಕಲಿತುಕೊಂಡು ವೃತ್ತಿ ಮಾಡುತ್ತಲೇ ಓದನ್ನು ನಿರ್ವಹಿಸಿ ಕಲಿಕೆ ವೃತ್ತಿ ಮಾಡಿದೆ.ಮಹಿಳಾತರಬೇತಿ
ಭಾರತೀಯ ಬೌದ್ಧ ಮಹಾ ಸಭೆಯ ಕೊಡುಗೆ ನನಗೆ ಪ್ರೇರಣೆ ನೀಡಿದೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ,ಡಾ.ರೂತಾ ಪ್ರಭುರಾ ವ್,ಲಕ್ಷ್ಮಣರಾವ್, ನಿಂಗಪ್ಪ ಟೆಂಗಳಿ,ಮಾಣಿಕರಾವ್ ಶೇರಿಕಾರ ಇತರರು ಇದ್ದರು.ಹಿರಿಯ ಸಾಹಿತಿ ಡಾ.ಕೆ.ಎಸ್.ಬಂಧು ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿ ವಂದಿಸಿದರು.