ತ್ಯಾಗ ಬಲಿದಾನ ಸಂಕೇತ ಬಕ್ರೀದ್ ಆಚರಣೆ
ಔರಾದ್:ಜೂ.18: ತ್ಯಾಗ, ಬಲಿ ದಾನದ ಸಂಕೇತವಾದ ಈದ್- ಉಲ್-ಅಜ್ಹಾ (ಬಕ್ರೀದ್) ಹಬ್ಬ ವನ್ನು ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.
ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಬೆಳಗಿನ ಜಾವ ಎದ್ದು ಶುಭ್ರರಾಗಿ ಹೊಸ ಬಟ್ಟೆಗಳನ್ನು ತೊಟ್ಟು ಗ್ರಾಮದ ಈದ್ಗಾ ಮೈದಾನದಲ್ಲಿ ನಮಾಜ್ ನೇರವೇರಿಸಿದರು.
ಧರ್ಮಗುರು ಹಾಫಿಜ್ ರೈಹಾನ ಅನ್ಸಾರಿ ಮಾತನಾಡಿ, ಅಲ್ಲಾಹನ ಇಚ್ಛೆಯಂತೆ ಪ್ರವಾದಿ ಇಬ್ರಾಹಿಮರು ತಮ್ಮ ಇಳಿವಯಸ್ಸಿನಲ್ಲಿ ಪುತ್ರ ಇಸ್ಮಾಯಿಲ್ ರನ್ನು ಬಲಿ ಕೊಡಲು ಸಿದ್ಧರಾದರು. ಆ ಘಟನೆಯ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ನಮ್ಮಲ್ಲಿರುವ ಸಿಟ್ಟು, ದ್ವೇಷಾಸೂಯೆ, ಅಹಂಕಾರ, ದುಶ್ಚಟ, ಭಯ, ಆತಂಕ ಇತರೆ ದುರ್ಗುಣಗಳನ್ನು ನಾವು ತ್ಯಜಿಸಿದರೆ ಅದೂ ಕೂಡ ಬಲಿದಾನ, ತ್ಯಾಗಕ್ಕೆ ಸಮಾನವಾಗಿದೆ ಎಂದು ಹೇಳಿದರು.
ದೇಶದ ನೆಲ,ಜಲ, ನಾಡು-ನುಡಿಗಾಗಿ ಹಿರಿಯರ ಮಾರ್ಗದರ್ಶ­ನದಲ್ಲಿ ಮುನ್ನಡೆಯಬೇಕು ಹಾಗೂ ಹಿಂದು-­ಮುಸ್ಲಿಂ ಬಾಂಧವರು ಇಂತಹ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿ ಭಾವೈಕ್ಯತೆ ಮೂಡು­­ವಂತಾಗಲಿ ಎಂದು ಹಾಗೂ ವಿಶ್ವ­ಶಾಂತಿಗಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಬಾಬುಮಿಯ್ಯಾ, ಘುಡುಸಾಬ, ಹುಸೇನಸಾಬ್, ಇಬ್ರಾಹಿಂಸಾಬ್, ನಜೀರಸಾಬ, ಮೌಲಾಸಾಬ, ಚಿನ್ನುಮಿಯ್ಯಾ, ಫತ್ರುಸಾಬ, ನಿಸಾರ್ ಅಹ್ಮದ್, ತೌಫಿಕ ಮುಲ್ಲಾ, ಖಯುಮಸಾಬ್, ಬಸಿರ ವಾಡವಾಣೆ, ಎಂ. ಡಿ. ಫಯಾಜ್, ಶಫಿಯೋದಿನ, ಅನ್ವರ, ಜಮಿರ ಡಿ. ಜೆ, ಎಜಾಸ್, ಆಯಾಜ, ಅಸದ ಸೌದಾಗರ, ಲಾಯಕಲಿ, ಯುನುಸ್, ಬಿಲಾಲ ಮುಲ್ಲಾ, ಸಿಕಂದರ್, ಆಫೆÇ್ರೀಜ್, ಲುಕಮಾನ್, ಸೋಹೇಲ್, ಆಸಿಫ್, ಶಾದುಲ್, ಅತಿಕ, ಸಮಿರ ಸೇರಿದಂತೆ ಇತರರು ಇದ್ದರು.