ವರ್ಷದಿಂದ ಅನುದಾನವಿಲ್ಲದಕ್ಕೆ ಅಭಿವೃದ್ದಿ ಕಾರ್ಯ ಕುಂಠಿತ
ತಾಳಿಕೋಟೆ:ಜೂ.18: ಕಳೆದ ಒಂದು ವರ್ಷದಿಂದ ಶಾಸಕರಿಗೆ ಸರ್ಕಾರದಿಂದ ಅನುದಾನ ದೊರಕಲಾರದ್ದಕ್ಕೆ ಅಭಿವೃದ್ದಿ ಕಾರ್ಯಗಳು ಕುಂಠಿತಗೊಳ್ಳುತ್ತಾ ಸಾಗಿದೆ ಕೂಡಲೇ ಶಾಸಕರುಗಳಿಗೆ ಅನುದಾನ ಹಂಚಿಕೆಯ ಕಡೆಗೆ ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಪುರಸಭಾ ಸದಸ್ಯ ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಒತ್ತಾಯಿಸಿದ್ದಾರೆ.
ಸೋಮವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಕಳೆದ ಒಂದು ವರ್ಷದಿಂದ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳು ಎಲ್ಲ ಜನರಿಗೆ ಮುಟ್ಟಿರುವದು ಸಂತಸದ ವಿಷಯವಾಗಿದೆ ಸಾಕಷ್ಟು ಬಡಜನರಿಗೆ ಈ ಯೋಜನೆಗಳಿಂದ ಅನುಕೂಲವಾಗಿದೆ ಆದರೆ ಶಾಸಕರಿಗೆ ಇಲ್ಲಿಯವರೆಗೂ ಯಾವುದೇ ಅನುದಾನ ಸಿಗಲಾರದಕ್ಕೆ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲು ಸಾಧ್ಯವಾಗುತ್ತಿಲ್ಲಾ ಇದರಿಂದ ನಮ್ಮ ಸ್ವಪಕ್ಷದ ಶಾಸಕರುಗಳೇ ಅನುದಾನಕ್ಕಾಗಿ ಅಸಮಾದಾನ ವ್ಯಕ್ತಪಡಿಸುತ್ತಾ ಸಾಗಿದ್ದಾರೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರುಗಳಿಗೆ ಅನುದಾನ ಹಂಚಿಕೆಯ ಬಗ್ಗೆ ಲಕ್ಷ ವಹಿಸಬೇಕು ಯಾಕೆಂದರೆ ಶಾಸಕರಾಗಿ ಆಯ್ಕೆಯಾದವರು ಕ್ಷೇತ್ರದ ಜನರಿಗೆ ಚುನಾವಣೆಯಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಾಕಷ್ಟು ಬರವಸೆಯನ್ನು ನೀಡಿದ್ದಾರೆ ವರ್ಷದಿಂದ ನೀಡಿದ ಒಂದೂ ಬರವಸೆಯೂ ಇಡೇರಿಸಲು ಆಗುತ್ತಿಲ್ಲಾ ಹೀಗೆ ಮುಂದುವರೆದರೆ ಜನರು ಕಾಂಗ್ರೇಸ್ ಸರ್ಕಾರದ ಮೇಲೆ ಶಾಸಕರುಗಳ ಮೇಲೆ ನಿರಾಸಕ್ತ ಹೊಂದಲಿದ್ದಾರೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬಿಳ್ಳಲಿದೆ ಇದನ್ನು ತಪ್ಪಿಸಲು ಕೂಡಲೇ ಶಾಸಕರುಗಳಿಗೆ ಅನುದಾನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ ಅವರು ಮುದ್ದೇಬಿಹಾಳ ಮತಕ್ಷೇತ್ರದ ನಮ್ಮ ಕಾಂಗ್ರೇಸ್ ಪಕ್ಷದ ಶಾಸಕರು ಸರ್ಕಾರದಿಂದ ಅನುದಾನ ಸಿಗದಿದ್ದರೆ ರಾಜಕೀಯವಾಗಿ ತ್ಯಾಗ ಮಾಡಲು ಸಿದ್ದನಿದ್ದೇನೆಂದು ಹೇಳಿದ್ದಾರೆ ಅವರು ಹಿರಿಯ ಶಾಸಕರು ಆಗಿದ್ದಾರೆ ಅವರ ಮನಸ್ಸಿಗೆ ಇಷ್ಟೊಂದು ಘಾಸಿ ಉಂಟು ಮಾಡಿದೆ ಎಂದರೆ ಮುಖ್ಯಮಂತ್ರಿಗಳು ಅರ್ಥೈಸಿಕೊಳ್ಳಬೇಕೆಂದರು.
ಪೇಟ್ರೋಲ್ ಬೆಲೆ ಮತ್ತು ಡಿಸೇಲ್ ಬೆಲೆ ದೀಡಿರನೇ ಹೆಚ್ಚಿಸಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಾ ಸಾಗಿದೆ ಈ ಹಿಂದೆ ಬಿಜೆಪಿ ಸರ್ಕಾರ ಸಾಕಷ್ಟು ಭಾರಿ ಬೆಲೆ ಏರಿಕೆ ಮಾಡಿದರೂ ಕೂಡಾ ಆಕ್ರೋಶ ಕಂಡಿಲ್ಲಾ ಆದರೆ ಮೊದಲೇ ಎಲ್ಲ ದಿನಬಳಿಕೆ ವಸ್ತುಗಳ ಏರಿಕೆ ಸಮಯದಲ್ಲಿ ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವದು ಜನರ ಅಸಮಾದಾನಕ್ಕೆ ಕಾರಣವಾಗಿದೆ ಮುಖ್ಯಮಂತ್ರಿಗಳು ಬೆಲೆ ಏರಿಕೆಯ ಬಗ್ಗೆ ಇನ್ನೊಮ್ಮೆ ಪರಿಸಿಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು ಶಾಸಕರಿಗೆ ಅನುದಾನ ಸಿಗಲಾರದ್ದಕ್ಕೆ ಗ್ಯಾರೆಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಒತ್ತಾಯಿಸುತ್ತಿದ್ದಾರೆ ಗ್ಯಾರೆಂಟಿ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದು ಅವುಗಳ ಸ್ಥಗಿತಗೊಳಿಸದೇ ಶಾಸಕರುಗಳಿಗೆ ಅನುದಾನ ಒದಗಿಸುವ ಕಡೆಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕೆಂದು ಪುರಸಭಾ ಸದಸ್ಯ ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಒತ್ತಾಯಿಸಿದರು.