ಧಾರ್ಮಿಕ ಮತ್ತು ಪರಿಸರ ಕ್ಷೇತ್ರಕ್ಕೆ ಚನ್ನಮಲ್ಲೇಶ್ವರ ಶ್ರೀಗಳ ಕೊಡುಗೆ ಅಪಾರ
ಹುಮನಾಬಾದ್ :ಜೂ.18: ಲಿಂಗೈಕ್ಯ ಚೆನ್ನಮಲ್ಲೇಶ್ವರರು ಸರ್ವ ಧರ್ಮದ ಭಕ್ತರ ಆರಾಧ್ಯ ಸ್ವಾಮೀಜಿಯವರಾಗಿದ್ದರು. ಕೊನೆಯ ಉಸಿರಿನ ವರೆಗೆ ಶ್ರೀಮಠದ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ ತ್ಯಾಗಿ ಚೆನ್ನಮಲ್ಲೇಶ್ವರ ಸ್ವಾಮಿಜಿ ಎಂದು ಜಹಿರಬಾದ ಮಲ್ಲಯ್ಯಾಗಿರಿಯ ಆಶ್ರಮದ ಬಸವಲಿಂಗ ಅವಧೂತರು ತಾಲೂಕಿನ ಇಟಗಾ ಶಿವಸಿದ್ಧ ಯೋಗಾಶ್ರಮ ಮುಕ್ತಿ ಮಠದ ಪೀಠಾಧಿಪತಿ ಲಿಂಗೈಕ್ಯ ಚೆನ್ನಮೇಶ್ವರ ತ್ಯಾಗಿಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ಹಸಿರು ಹಬ್ಬ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ತಿಳಿಸಿದರು.
ದಾಸೋಹ ಮೂರ್ತಿ ಚನ್ನಮಲೇಶ್ವರ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕೆಂದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರು ಕಡ್ಡಾಯವಾಗಿ ಮರಗಿಡ ಬೆಳೆಸಿ ಸಂರಕ್ಷಿಸಬೇಕೆಂದು ಬಸವಲಿಂಗ ಅವಧೂತರು ಕರೆ ನೀಡಿದರು. ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಲಿಂಗೈಕ್ಯ ಚೆನ್ನಮಲ್ಲೇಶ್ವರ ತ್ಯಾಗಿಗಳ ಸಂಕಲ್ಪ ಇಡೇರಿಸಲು ನಿತ್ಯ ದಾಸೋಹ ಪುನರಾಂಬಿಸಲಾಗುವುದು ಭಕ್ತಾದಿಗಳು ಅನ್ನದಾಸೋ ಸೇವೆ ಮಾಡುವ ಇಚ್ಛೇಉಳ್ಳವರು ಇದ್ದರೆ ಅಜೀವ ಸದಸ್ಯತ್ವ ಸದಸ್ಯರಾಗಲು ಕರೆ ನೀಡಿದರು.
ಚನ್ನಮಲ್ಲಶ್ವರ ತ್ಯಾಗಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಘೋಷಿಸಿದರು. ಪರಿಸರವಾದಿ ಶೈಲೇಂದ್ರ ಕವಾಡಿ ಮಾತನಾಡಿ ಕಳೆದ 20 ವರ್ಷಗಳಿಂದ ಶ್ರೀಮಠದಲ್ಲಿ ಪರಿಸರ ಸಂರಕ್ಷಣೆಗೆ ಹಸಿರು ಹಬ್ಬ ಆಚರಿಸಲಾಗುತ್ತಿದೆ ಎಂದರು. ಮಹಮ್ಮದ್ ಅಸ್ಲಾಂಮಿಯಾ ಮಾತನಾಡಿದರು ಶಂಭುಲಿಂಗ ಶಿವಾಚಾರ್ಯರು, ರಾಜಶೇಖರ ಗೋರ್ಟಾ, ಸದ್ಲಾಪುರ್ ಸಿದ್ದಲಿಂಗ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಅಭಿನವ ಶರಣ ಶಂಕರಲಿಂಗ ಮಹಾರಾಜರು, ಪ್ರಭಯ್ಯ ಸ್ವಾಮಿ, ಶಾಂತಕುಮಾರ್ ಸ್ವಾಮಿ, ಮಲ್ಲಯ್ಯ ಶಾಸ್ತ್ರಿಗಳು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಲಿಂಗಕ್ಕೆ ಚನ್ನಮಲ್ಲೇಶ್ವರ ಗದ್ದಿಗೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಮಾಜ ಕಾರ್ಯಕರ್ತ ವೀರಶೆಟ್ಟಿ ಮಾಲಿಪಾಟೀಲ್, ಚಂದ್ರಣ್ಣ ಮೈಲಾರ್, ಅಶೋಕ್ ಚೌದ್ರಿ, ಕಲ್ಲಯ್ಯ ಸ್ವಾಮಿ, ಮಲ್ಲು ಮುನ್ನುರುರೆಡ್ಡಿ ಸೇರಿದಂತೆ ಗ್ರಾಮದ ಸರ್ವ ಧರ್ಮದ ಭಕ್ತರು ಉಪಸ್ಥಿತರಿದ್ದರು. ನೀಲಕಂಠ ಇಸ್ಲಾಂಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಪುಣ್ಯಸ್ಮಣೋತ್ಸವ ಅಂಗವಾಗಿ ವಿಶೇಷ ದಾಸೋಹ ಜರುಗಿತು.