ವರ್ಣ ಚಿಲುಮೆ ಗ್ರಂಥ ಬಿಡುಗಡೆ
ಹುಮನಾಬಾದ್:ಜೂ.18: ಹಿರಿಯ ಕಲಾವಿದರು ಮತ್ತು ಚಿತ್ರಕಲಾ ಶಿಕ್ಷಕರಾದ ಅಶೋಕಕುಮಾರ ಹಿರೇಮಠ ಅವರ ವಯೋ ಸೇವಾ ನಿವೃತ್ತಿ ಪ್ರಯುಕ್ತ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಗೆಳೆಯರ ಬಳಗದಿಂದ ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಮಾರಂಭ ಮತ್ತು ವರ್ಣ ಚಿಲುಮೆ ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಿತು.
ಶಾಸಕ ಡಾ. ಸಿದ್ದು ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಅವರು ವರ್ಣ ಚಿಲುಮೆ ಗ್ರಂಥ ಬಿಡುಗಡೆ ಮಾಡಿದರು. ಹಾರಕುಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿ, ಹುಮನಾಬಾದ್ ಹಿರೇಮಠ ಸಂಸ್ಥಾನದ ರೇಣುಕವೀರ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ದಿವ್ಯ ಸಾನಿಧ್ಯ ವಹಿಸಿದರು.
ಹಿರಿಯ ಕಲಾವಿದರು ಮತ್ತು ಚಿತ್ರಕಲಾ ಶಿಕ್ಷಕರಾದ ಅಶೋಕಕುಮಾರ ಹಿರೇಮಠ ಅವರ ವಯೋ ಸೇವಾ ನಿವೃತ್ತಿ ಅಂಗವಾಗಿ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಕಿರಿಯ ಶ್ರೇಣಿ ಕುಲಸಚಿವೆ ಅನುರಾಧಾ ವಸ್ತ್ರದ, ಬಿಇಓ ವೆಂಕಟೇಶ ಗುಡಾಳ, ಡಾ.ಗೋವಿಂದ, ರವೀಂದ್ರ ರೆಡ್ಡಿ ಮಾಲಿ ಪಾಟೀಲ, ಶೇಖ ಮಹೆಬುಬ್ ಪಟೇಲ್,
ಕಸಪ ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ರಾಜಣ್ಣ ಮುಗಳಿ, ಮುರುಗೇಂದ್ರ ಸಜ್ಜನಶೆಟ್ಟಿ, ಶರದಕುಮಾರ ನಾರಾಯಣಪೇಟ್ಕರ್, ಶಶಿಕಾಂತ ಘವಳಕರ್, ವಿಜಯಕುಮಾರ ಚೆಟ್ಟಿ, ಶಾಂತವೀರ ಯಲಾಲ, ಶ್ರೀಕಾಂತ ಸೂಗಿ, ಪಂದೀತ ಬಾಳುರೆ, ಶಿವರಾಜ ಮೇತ್ರೆ, ಮಲ್ಲಪ್ಪ ಜಿಗಜೀಣಗಿ, ಇದ್ದರು.