ಬಕ್ರೀದ್ ಹಬ್ಬದ ನಿಮಿತ್ಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಭಾಂದವರು
ಬಸವಕಲ್ಯಾಣ:ಜೂ.18: ಬಕ್ರೀದ್ ಹಬ್ಬದ ನಿಮಿತ್ಯ ಹುಲಸೂರ ಪಟ್ಟಣದ ಸರಕಾರಿ ಆಸ್ಪತ್ರೆಯ ಹತ್ತಿರದಲ್ಲಿರುವ ಈದ್ಗಾ ಮೈದಾನದಲ್ಲಿ ಸೊಮವಾರ ಬೆಳಿಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ನಮಾಜ್ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಪೇಶಿಮಾಮ, ಮೌಲಾನಾ ಅಹ್ಮದ್ ರಜಾ, ಮೌಲಾನಾ ಬಡೇ ಬಜಾರ, ಈದ್ಗಾ ಸಮಿತಿಯ ಅಧ್ಯಕ್ಷ ಗೌಸ ಬಿರಿವಾಲೆ, ಸದಸ್ಯರಾದ ಆಯುಬ ಖುರೇಶಿ, ಜಾಂಗಿರ ಮೌಲಾ, ಗ್ರಾಪಂ ಸದಸ್ಯ ಮನಸೂರ ದಾವಲಜಿ, ಮಾಜಿ ಸದಸ್ಯ ಇಜಾಜ ಜಹಾಂಗಿರ, ಗುಲಾಮ ಬಡಾಯಿ, ಅಬ್ದುಲ ಹಮ್ಮಿದ್, ಯುನೂಸ ಹೆಡೆ, ಇಕ್ರಾಮ ಠಾಕೂರ, ಅಬರಾರ ಸೌಧಾಗರ, ಮುಜಿಬ್ ದಾವಲಜಿ, ಆಸಿಫ್ ಸಿಲಾರ, ಖಯೂಮೋದಿನ್ ದಾವಲಜಿ, ಇಲ್ಯಾಸ ಅಹಮದ, ಜಮೀರೋದಿನ್ ಬೆರಿವಾಲೆ, ಸಿದ್ದಿಕ್ ಸೌಧಾಗರ ಸೇರಿದಂತೆ ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.