ಹಾರಕೂಡ ಶ್ರೀಗಳ ಗುರುವಂದನಾ ಹಾಗೂ ತುಲಾಭಾರ ಸಮಾರಂಭ 20ಕ್ಕೆ
ಬಸವಕಲ್ಯಾಣ: ಜೂ.18:ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಜೂನ್ 20 ರಂದು ಬೆಳಿಗ್ಗೆ 11 ಕ್ಕೆ ಬಸವಕಲ್ಯಾಣದ ಶ್ರೀ ಹಾರಕೂಡದ ಸಕಲ ಸದ್ಭಕ್ತ ಸೇವಾ ಸಮಿತಿಯಿಂದ ಡಾ. ಚನ್ನವೀರ ಶಿವಾಚಾರ್ಯರಿಗೆ ಗುರುವಂದನಾ ಹಾಗೂ ತುಲಾಭಾರ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದ್ದು ಶ್ರೀಮಠದ ಅಪಾರ ಭಕ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಲಾಗಿದೆ.
ಈ ಕುರಿತು ನಗರದಲ್ಲಿ ಭಾನುವಾರ ಸಂಜೆ ಬಸವಕಲ್ಯಾಣದ ಶ್ರೀ ಹಾರಕೂಡದ ಸಕಲ ಸದ್ಭಕ್ತ ಸೇವಾ ಸಮಿತಿಯಿಂದ ಕರಪತ್ರ ಬಿಡುಗಡೆ ಮಾಡಿದ ಭಕ್ತರು ಮಾತನಾಡಿ, ಸಮಾರಂಭಕ್ಕೂ ಮುನ್ನ ಬೆಳಿಗ್ಗೆ 10ಕ್ಕೆ ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಬಿಕೆಡಿಬಿ ಕಲ್ಯಾಣ ಮಂಟಪದ ವರೆಗೆ ಹಾರಕೂಡ ಶ್ರೀಗಳಿಗೆ ಸಾರೋಟದಲ್ಲಿ ಭವ್ಯವಾದ ಮೆರವಣಿಗೆ ಜರುಗಲಿದ್ದು ಮೆರವಣಿಗೆಯಲ್ಲಿ ಕುಂಭ ಕಳಶ ಹೊತ್ತ ಮಹಿಳೆಯರು, ಸಕಲ ವಾದ್ಯ ವೈಭವದೊಂದಿಗೆ ಸಾಗಿದ ನಂತರ ಗುರುವಂದನಾ ಹಾಗೂ ಭಕ್ತಿ ತುಲಾಭಾರ ಕಾರ್ಯಕ್ರಮ ಜರಗುತ್ತದೆ.
ಹೀಗಾಗಿ ನಗರದ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರು ಕಾರಣ್ಯದ ಕೃಪಾಶೀರ್ವಾದ, ಪ್ರಸಾದ ಸ್ವೀಕರಿಸಿ, ಪುನೀತರಾಗಬೇಕೆಂದು ಬಸವಕಲ್ಯಾಣದ ಶ್ರೀ ಹಾರಕೂಡದ ಸಕಲ ಸದ್ಭಕ್ತ ಸೇವಾ ಸಮಿತಿಯಿಂದ ಕೋರಲಾಗಿದೆ.
ಕರ ಪತ್ರ ಬಿಡುಗಡೆಯ ವೇಳೆ ಡಾ. ಬಸವರಾಜ ಸ್ವಾಮಿ, ವಿರಣ್ಣ ಶೀಲವಂತ, ರಾಮೇಶ ರಾಜೋಳೆ, ಸೂರ್ಯಕಾಂತ ಮಠ, ಸಿದ್ರಾಮ ಕವಳೆ, ಶರಣು ಪವಾಡಶೆಟ್ಟಿ, ಶಾಂತವೀರ ಸ್ವಾಮಿ ಪೂಜಾರಿ, ಮಲ್ಲಿಕಾರ್ಜುನ ನಂದಿ, ರಾಕೇಶ ಪುರವಂತ, ರಾಜಕುಮಾರ ದೇಗಾಂವ, ರೇವಣಸಿದ್ದಯ್ಯ ಮಠಪತಿ, ಸದಾನಂದ ಕಣಜಿ, ಲೋಕೇಶ ಮಠಪತಿ, ಶರಣಯ್ಯ ಮಠಪತಿ, ಬುದಯ್ಯ ಮಠಪತಿ ಸೇರಿದಂತೆ ಮತ್ತಿತರಿದ್ದರು.