ದೇವಸಮುದ್ರ ಗ್ರಾಮದಲ್ಲಿ ಮೂರು  ಕರಡಿ ಪ್ರತ್ಯಕ್ಷ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.18: ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮಕ್ಕೆ ಇಂದು ಬೆಳ್ಳಂ ಬೆಳಿಗ್ಗೆ ಗ್ರಾಮಕ್ಕೆ ಕರಡಿಗಳು ಬಂದು ಗ್ರಾಮದ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿವೆ.
ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಕರಡಿಗಳು ಗ್ರಾಮಕ್ಕೆ ಲಗ್ಗೆ ಇಟ್ಟಿವೆ.
ಗ್ರಾಮಕ್ಕೆ ಬಂದ  ಕರಡಿಯನ್ನು ನೋಡಿದ ನಾಯಿಗಳು ಜೋರಾಗಿ ಬೋಗೋಳೊಕೆ ಪ್ರಾರಂಭಿಸಿವೆ. ಇದನ್ನು ಗಮನಿಸಿದ ಜನರು ಕರಡಿಗಳನ್ನು ನೋಡಿ ಗಾಬರಿಯಾಗಿದ್ದಾರೆ.  ಕೂಡಲೇ ಜನರೆಲ್ಲ ಸೇರಿ ಕೂಗಾಟ ಮಾಡಿದ ಹಿನ್ನಲೆ ಕರಡಿಗಳು ದಿಕ್ಕಾಪಾಲಾಗಿವೆ.
ಒಂದೊಂದು ದಿಕ್ಕಿಗೆ ಒಂದೊಂದು ಕರಡಿಗಳು ಓಡಿ ಹೋಗಿವೆ. ಒಂದು ಕರಡಿ ಮಾತ್ರ ಗ್ರಾಮದೊಳಗೆ ನುಗ್ಗಿ ಹುಲ್ಲಿನ ಬಣವೆಯ ಬಳಿ ಅವಿತುಕೊಂಡಿದೆ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಅಗಮಿಸಿದೆ.
ಗ್ರಾಮದ ಬಳಿ ದರೋಜಿ ಕರಡಿ ಧಾಮ ಇರೋ ಹಿನ್ನಲೆಯಲ್ಲಿ  ಅಗಾಗ್ಗೆ ಹೊಲ ಗದ್ದೆಗಳ ಬಳಿ ಈ ರೀತಿಯಲ್ಲಿ ಕರಡಿ ಕಾಣಿಸಿಕೊಳ್ಳುವದು ಸಹಜ. ಆದರೆ  ಗ್ರಾಮಕ್ಕೆ ಬರುವುದಿಲ್ಲ. ಬಂದರೂ ಗ್ರಾಮದ ಸನಿಹದಲ್ಲೇ ರಾತ್ರಿಯ ವೇಳೆ ಓಡಾಡಿ ಹೋಗುತ್ತವೆ. ಅದರೆ ಈ ಬಾರಿ‌ ನೇರವಾಗಿ ಗ್ರಾಮದೊಳಗೆ ಬಂದು ಕೆಲಕಾಲ ಆತಂಕ ಸೃಷ್ಟಿ ಮಾಡಿದ್ದು ಜನರಲ್ಲಿ ಆತಂಕಕ್ಕೆ ಕಾರಣ ಎನ್ನಬಹುದು.