ಹಬೋಹಳ್ಳಿ :ಸರ್ಕಾರಿ  ಶಾಲಾ ಮಕ್ಕಳಿಗೆ ಲೇಖನಾ ಸಾಮಗ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.18 ತಾಲೂಕು ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ರಾಮನಗರ ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರದಗಡ್ಡಿ 42 ಮಕ್ಕಳಿಗೆ ಲೇಖನ ಸಾಮಗ್ರಿಗಳಾದ ಮಗ್ಗಿ ಪುಸ್ತಕ, ನೋಟ್ ಪುಸ್ತಕ ,ಪೆನ್ನು ,ಪೆನ್ಸಿಲ್ ಸ್ಕೇಲ್ ,ರಬ್ಬರ್ ಮೆಂಡರ್ ವಿತರಿಸಲಾಯಿತು .
ಕಾರ್ಯಕ್ರಮದ ಉದ್ಘಾಟನೆ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ನೆರವೇರಿಸಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ಪುಸ್ತಕ ಪೆನ್ನು ಹಾಗು ನೋಟ್ ಪುಸ್ತಕವನ್ನು  ವಿತರಿಸುವುದರಿಂದ ಓದಿನಲ್ಲಿ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದಕ್ಕೆ ಸಹಾಯವಾಗುತ್ತದೆ . ಗ್ರಾಮೀಣ ಭಾಗದಲ್ಲಿ ಅನೇಕ ಬಡ ಪ್ರತಿಭಾವಂತ ಮಕ್ಕಳು ಇದ್ದಾರೆ. ಅವರಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ನೀಡುವುದರಿಂದ ಸಹಾಯವಾಗುತ್ತದೆ ಎಂದರು.  ಲೇಖನಾ ಸಾಮಗ್ರಿಗಳನ್ನು  ಖರೀದಿಸಲು ರೂ.1000  ದೇಣಿಗೆ ನೀಡುವುದರ ಮೂಲಕ  ಪ್ರಶಂಸೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಲ್. ಡಿ ರವಿ ನಾಯ್ಕ,  ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಎಂಪಿಎಂ ಮಂಜುನಾಥ, ಪದಾಧಿಕಾರಿಗಳಾದ  ಸಿ.ವೈ ಮೊರ್ನಾಳ್ , ಗುರುಭವನ ಸಮಿತಿಯ ಸದಸ್ಯರಾದ ಎಲ್. ನೇಮ್ಯಾನಾಯ್ಕ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ಬಿ .ಚಂದ್ರಪ್ಪ, ಕರ್ನಾಟಕ ರಾಜ್ಯ ಎಸ್ ಸಿ/ ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷರಾದ ಹೆಚ್ .ಕೊಟ್ರಪ್ಪ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷರಾದ ಎ. ಸೋಮನಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಟಿ. ಸೋಮಶೇಖರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಸೊಪ್ಪಿಮಠ,  ರಾಮಣ್ಣ, ಎಲ್. ರಾಮನಾಯ್ಕ, ಪೋಮ್ಯಾನಾಯ್ಕ, ಕೆ. ಮಲ್ಲಪ್ಪ ವಿರೂಪಾಕ್ಷ, ಶಿಕ್ಷಕಿ ಪುಷ್ಪಾವತಿ , ಬಿ.ಬಸಪ್ಪ, ಸಿ.ವಿರೂಪಾಕ್ಷ ಇತರರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕ ಟಿ.ಸೋಮಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು