ಹಬೋಹಳ್ಳಿ : ತ್ಯಾಗ ಬಲಿದಾನದ ಸಂಕೇತ ಬಕ್ರೀದ್ ಆಚರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.18ಪಟ್ಟಣ  ಸೇರಿದಂತೆ  ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನದ ಸಂಕೇತ ಬಕೀರಿದ್  ಹಬ್ಬವನ್ನು ಸೋಮವಾರ ಆಚರಿಸಿದರು.
ಪಟ್ಟಣದ ಈದ್ಗ  ಮೈದಾನದಲ್ಲಿ ನೂರಾರು ಜನ ಮುಸ್ಲಿಮರು  ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮೌಲನಾ ಶೋಹಿಬ್ ಹಲಾಂ ಪ್ರಾರ್ಥನೆ ಬೋಧಿಸಿದರು.
 ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಂಡ ಕಾಸೀಂ, ಉಲವತ್ತಿ ಬಾಬುವಲಿ, ಅಲ್ಲಾಭಕ್ಷಿ ಏನ್ ಎಂ ಗೌಸ್ ಎಣ್ಣಿ ಭಾಷಾ,ಜಂದಿ ಸಾಬ್, ಪೀರ್ ಸಾಬ್ , ಬುಡೇನ್ ಸಾಬ್, ಅಬ್ದುಲ್ ಗಫರ್ ಖಾನ್, ಕಲೀಲ್ ಸಾಬ್, ಅಬ್ದುಲ್ ರಜಾಕ್, ರಾಜಸಾಬ್, ಜಿನ್ನಾ  ಸಾಬ್ , ನಜೀರ್ ಸಾಬ್, ಇರ್ಫಾನ್, ಅಕ್ಬರ್, ಬಾಬು ಸಾಬ್, ಇತರರಿದ್ದರು