ಪ್ರಕೃತಿಗೆ ವಿರುದ್ಧವಾದ ಕೃಷಿ ಅಪಾಯಕಾರಿ: ಸಜ್ಜನ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.18 ರೈತರು ಸಾವಯವ ಗೊಬ್ಬರ ಬಳಸದೆ ರಾಸಾಯನಿಕ ಬಳಕೆಯ ಮೂಲಕ ಪ್ರಕೃತಿ ವಿರುದ್ಧವಾಗಿ ಕೃಷಿ  ಮಾಡುತ್ತಿರುವುದು ಅಪಾಯಕಾರಿ ಎಂದು ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ವಿಶ್ವೇಶ್ವರ ಸಜ್ಜನ್ ಕಳವಳ ವ್ಯಕ್ತಪಡಿಸಿದರು
 ಪಟ್ಟಣದ ಹಗರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸೋಮವಾರ ಕೃಷಿ ಭೂಮಿಗಾಗಿ ನಾವು ಅಂದೋಲನದಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ  ಚಾಲನೆ ನೀಡಿ ಮಾತನಾಡಿದರು. ಹಲವಾರು ರಾಸಾಯನಿಕ ಕಂಪನಿಗಳು ತಮ್ಮ ಸ್ವಾರ್ಥಕ್ಕಾಗಿ ರೈತರಿಗೆ ದಾರಿ ತಪ್ಪಿಸಿ ಭೂಮಿಗೆ ವಿಷ ಉಣಿಸುತ್ತಿದ್ದಾರೆ. ಇದರಿಂದ ಭೂಮಿಯ ಸತ್ವ ಹಾಳಾಗಿ ರೈತರು  ನಷ್ಟದಲ್ಲಿ ಅನುಭವಿಸುತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆ ಇದ್ದ ಕೃಷಿ ಪದ್ಧತಿ ಇಂದು ನಶಿಸಿಹೋಗಿದೆ. ಹಲವಾರು ಜೀವರಾಶಿಗಳು ರೈತರ ಮಿತ್ರ ಗಳಾಗಿದ್ದರು. ಕ್ರಿಮಿನಾಶಕದಿಂದ ರೈತ ಜೀವ ರಾಶಿಗಳು ನಶಿಸಿಹೋಗಿವೆ. ಪರಿಸರದ ಕಾಳಜಿ ಅದರೊಂದಿಗೆ ಬದುಕು ಪ್ರಮಾಣಿಕತೆ ಸರಳತೆ ಮಾಯವಾಗಿದೆ. ಹಣದ ಆಸೆಗೆ ಭೂಮಿಯನ್ನು ಕಳೆದುಕೊಂಡು ರೈತ ಬೀದಿಗೆ ಬರುತ್ತಿದ್ದಾನೆ. ಜನಸಂಖ್ಯೆಗಿಂತಲೂ ಹೆಚ್ಚು ಕೃಷಿ ಭೂಮಿ ಕೃಷಿ ಯಾತರವಾಗಿ ಪರಿವರ್ತನೆ ಆಗುತ್ತಿರುವುದು ಅಪಾಯಕಾರಿ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸು ಮೂಲಕ ಭೂಪರವರ್ತನೆ ತಡೆಯಬೇಕು ಎಂದರು .
 ಕಾರ್ಯಕ್ರಮದ ಪ್ರಸ್ತಾವಿಕವಾಗಿ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ ಬಂಡವಾಳ ಶಾಹಿಗಳು ಕೃಷಿ ಭೂಮಿಯನ್ನು ಖರೀದಿ ಮಾಡಿಕೊಂಡು ರಿಯಲ್ ಎಸ್ಟೇಟ್ ಮಾಡುವುದರಿಂದ ಕೃಷಿ ಭೂಮಿ ಆಳಾಗಿ ಹೋಗುತ್ತಿದೆ. ರೈತರು ದುಡ್ಡಿನ ಆಸೆಗೆ ನಮ್ಮ ಪಿತ್ತಾರ್ಜಿತ ಆಸ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡರೆ ತಿನ್ನಲಿಕ್ಕೆ ಆಹಾರ ಸಿಗದಂತಾಗುತ್ತದೆ. ಈಗಾಗಲೇ ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಲಾಗಿದೆ . ತಾಲೂಕ ಕೇಂದ್ರದಿಂದ 10 ಕಿ.ಮೀ ಹಸಿರು ವಲಯವನ್ನಾಗಿ ಮಾಡುವಂತೆ  ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿದೆ. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಬೀದಿ ನಾಟಕದ ಮೂಲಕ ಜನಜಾಗೃತಿ ಕಾರ್ಯಕ್ರಮ ಏಳು ದಿನದಲ್ಲಿ   ಸುತ್ತ ನಾಲ್ಕು ಗ್ರಾಂ ಪಂ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಯೋಧ ರಾಮಿರೆಡ್ಡಿ  ವಹಿಸಿದ್ದರು
  ಮುಖಂಡರಾದ ಈ ಕೃಷ್ಣಮೂರ್ತಿ ಮುಟಗನಹಳ್ಳಿ ಕೊಟ್ರೇಶ್ ಹೆಚ್. ದೊಡ್ಡಬಸಪ್ಪ, ಖಾಜಾ ಹುಸೇನ್ ಮಾತನಾಡಿದರು.
 ಈ ಸಂದರ್ಭದಲ್ಲಿ ಲಿಂಗರಾಜ್ ಯಾದವ್, ಕಹಳೆ ಬಸವರಾಜ, ವೀರಯ್ಯಸ್ವಾಮಿ ಸರ್ದಾರ್ ಹುಲಿಗಮ್ಮ, ಹಲಗೂರು ಸಂತೋಷ್, ವಿಶ್ವನಾಥ್ ಸರ್ದಾರ್ ಹುಲಿಯಮ್ಮ ಎನ್. ನಾಗರಾಜ, ಹಂಚಿನಮನೆ ರಮೇಶ, ಪೂಜಾರ್ ಸಿದ್ದಪ್ಪ   ಇತರರಿದ್ದರು