ಶಂಕರ ಕಾಲೋನಿಯಲ್ಲಿ ವಿದ್ಯುತ್ ಅವಘಡ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.18 : ವಿದ್ಯುತ್ ಸರ್ವಿಸ್  ವೈರ್ ಗಳ ಮೇಲೆ ಮತ್ತೊಂದು ವೈರ್ ಬಿದ್ದ ಪರಿಣಾಮ  ಶಾರ್ಟ್ ಸರ್ಕ್ಯೂಟ್ ಆಗಿ  ವಿದ್ಯುತ್ ಕಂಬದ ಜೊತೆಗೆ ವೈರ್ ಗಳು ಸುಟ್ಟು ಹೋಗಿರೋ ಘಟನೆ ನಗರದ  ಶಂಕರ್ ಕಾಲೋನಿಯಲ್ಲಿ ನಡೆದಿದೆ.
ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ ಪರಿಣಾಮ   ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಅಪಾರ ಪ್ರಮಾಣದ ಸರ್ವಿಸ್ ವೈರ್ ಮತ್ತು ವೈಫೈ ಕೇಬಲ್ ಸುಟ್ಟು ಹೋಗಿವೆ.  ಶಂಕರ್ ಕಾಲೋನಿ ಮುಖ್ಯ ರಸ್ತೆಯಿಂದ ಪಕ್ಕದ ರಸ್ತೆಯ ಓಣಿಯಲ್ಲಿರೋ ಕಂಬದ ಮೇಲಿನ ಸರ್ವಿಸ್ ವೈರ್ ಮೇಲೆ ವೈಪೈ ಕೇಬಲ್‌ ಅಕಸ್ಮಾತ್ ಬಿದ್ದಿದೆ. ಪರಿಣಾಮ ಏಕಾಏಕಿ ಸಣ್ಣ ಪ್ರಮಾಣದ ಬೆಂಕಿ ಹತ್ತಿಕೊಂಡಿದೆ. ನೋಡ ನೋಡುತ್ತಿಂತೆ ವೈರ್ ಗಳ ಸುಟ್ಟು ಹೋಗೋದ್ರ ಜೊತೆಗೆ ಪಕ್ಕದಲ್ಲಿರೋ ಕಂಬಕ್ಕೆ ಬೆಂಕಿ ಆವರಿಸಿದೆ.  ವೈರ್ ಗಳು ಸುಟ್ಟ ಪರಿಣಾಮ ರಾತ್ರಿಯೀಡಿ ಶಂಕರ್ ಕಾಲೋನಿಯಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.