ಗುಡ್ಡದ ಬಸವಣ್ಣ ದೇವರ ಅನ್ನಸಂತರ್ಪಣೆ
ಗುಳೇದಗುಡ್ಡ,ಜೂ.18: ಇಲ್ಲಿನ ಗುಡ್ಡದ ಬಸವೇಶ್ವರ ದೇವಸ್ಥಾನದ ಬಸವಣ್ಣ ದೇವರ ಅನ್ನ ಸಂತರ್ಪಣೆ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ನಡೆಯಿತು.
ಪ್ರತಿವರ್ಷ ಉತ್ತಮ ಮಳೆಯಾಗಲಿ, ಒಳ್ಳೆಯ ಬೆಳೆ ಬರಲಿ ಎನ್ನುವ ಸದುದ್ದೇಶದಿಂದ ಗುಡ್ಡದ ಬಸವಣ್ಣ ದೇವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತದೆ. ಬಸವಣ್ಣ ದೇವರ ಉತ್ಸವ ಹಾಗೂ ಅನ್ನ ಸಂತರ್ಪಣೆಯನ್ನು ಬಹಳಷ್ಟು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಮುಂಜಾನೆ ಬಸವಣ್ಣನಿಗೆ ವಿಶೇಷ ರುದ್ರಾಭಿಷೇಕ, ಪೂಜೆಯನ್ನು ನೆರವೇರಿಸಲಾಯಿತು. ಗುಳೇದಗುಡ್ಡ, ಕೋಟೆಕಲ್ಲ, ತೋಗುಣಸಿ ಒಳಗೊಂಡು ಅನೇಕ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಬಂದು ಗುಡ್ಡದ ಬಸವಣ್ಣ ದೇವರ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.
ನಗರದ ಗಚ್ಚಿನಕಟ್ಟಿ ಯುವಕ ಮಿತ್ರರು ಹಾಗೂ ಹಿರಿಯರು ಸಂಘಟಿಸಿದ ಈ ಬಸವಣ್ಣ ದೇವರ ಉತ್ಸವ ಹಾಗೂ ಅನ್ನಸಂತರ್ಪಣೆಯಲ್ಲಿ ಶಿವಾನಂದ ಮಳ್ಳಿಮಠ, ಅಶೋಕ ಬೆಣ್ಣಿ, ಆನಂದ ತಿಪ್ಪಾ, ಮಹಾದೇವಪ್ಪ ಹುನಗುಂದ, ನೂರಂದಪ್ಪ ಅಲದಿ, ಈರಣ್ಣ ಜವಳಗಿ, ಗುರು ಕಾಳಿ, ಶಿವಲಿಂಗಪ್ಪ ಕಿತ್ತಲಿ, ಗಣೇಶ ಗೊಬ್ಬಿ, ರಾಜು ಬಣಗಾರ, ಸಿದ್ದಪ್ಪ ಗಡೇದ, ಪ್ರಶಾಂತ ಬೆಣ್ಣಿ, ಖಂಡೋಬಾ ಲಂಗೋಟಿ, ಪ್ರವೀಣ ತಿಪ್ಪಾ, ಶ್ರವಣ ತೋರ್ಲಿ ಸೇರಿದಂತೆ ಇನ್ನೂ ಅನೇಕ ಯುವಕ ಮಿತ್ರರು ಪಾಲ್ಗೊಂಡಿದ್ದರು.