ಲ್ಯಾಂಬೋರ್ಗಿನಿ ಕಾರು ಖರೀದಿಗೆ ಮುಂಗಡ ಹಣ ಕೊಟ್ಟಿದ್ದು ನಾನೇ
ಬೆಂಗಳೂರು.ಜೂ.೧೮- ಲ್ಯಾಂಬೋರ್ಗಿನಿ ಕಾರು ಖರೀದಿಗೆ ನಟ ದರ್ಶನ್‌ಗೆ ಮುಂಗಡ ಹಣ ಕೊಟ್ಟಿದ್ದೇ ನಾನು ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ರಾಬರ್ಟ್, ಹೆಬ್ಬುಲಿ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಅಭಿಮಾನಿಗಳು ನಮ್ಮ ಬಾಸ್ ಜತೆ ನೀವು ಸಿನಿಮಾ ಮಾಡಿದ್ದೀರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವ ಕುರಿತು ಮಾತನಾಡಿರುವ ಅವರು ಅವರಿಗೆ ಕೊಟ್ಟಿದ್ದೀನಿ. ನಾನೇನು ಬಿಟ್ಟಿ ಕೆಲಸ ಮಾಡಿಸಿಕೊಂಡಿಲ್ಲ. ಅವರು ಏನು ಬೆಲೆ ಕೊಟ್ಟಿದ್ದಾರೋ ಅದಕ್ಕೆ ತಕ್ಕಂತೆ ಕೆಲಸ ಮಾಡಿಸಿಕೊಂಡಿರುವುದಾಗಿ ತಿಳಿಸಿದರು.
ಈ ಹಿಂದೆ ನಿರ್ಮಾಪಕ ಉಮಾಪತಿ ‘ಕಾಟೇರ’ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ ಎಂದಿದ್ದರು. ಸಮಾರಂಭವೊಂದರಲ್ಲಿ ದರ್ಶನ್ ಅಯ್ಯೋ ತಗಡೇ ಎಂದು ಹೇಳಿ ತಿರುಗೇಟು ನೀಡಿದ್ದರು. ತಗಡಿಗೂ ಚಿನ್ನದ ಬೆಲೆ ಬರುತ್ತದೆ ಎಂದು ಉಮಾಪತಿ ತಿರುಗೇಟು ಕೊಟ್ಟಿದ್ದಾರೆ.