ಡೆಂಗಿ ಜ್ವರ ನಿರ್ಲಕ್ಷಿಸದೆ ಜಾಗೃತಿ ವಹಿಸಿ
ನವಲಗುಂದ,ಜೂ18 : ಮಳೆ ಸಂದರ್ಭದಲ್ಲಿ ಹೆಚ್ಚಾಗಿ ಹರಡುವ ಡೆಂಗಿ ಜ್ವರದ ಕುರಿತು ನಿರ್ಲಕ್ಷ್ಯಿಸಬಾರದು. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟೆ ಎನ್ನುವ ಸೊಳ್ಳೆಗಳಿಂದ ಈ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಹಾಗಾಗಿ, ಜ್ವರದ ಬಗ್ಗೆ ಜನ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಮಂಗಳವಾರ ಶಂಕರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಡೆಂಗಿ ಜ್ವರ ನಿಯಂತ್ರಣ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಮನೆ ಹಾಗೂ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ-ಡೆಂಗಿ ಜ್ವರದಿಂದ ಪಾರಾಗಬೇಕು ಎಂದರು
ತಹಶೀಲ್ದಾರ್ ಸುಧೀರ್ ಸಾಹುಕಾರ್, ಇಓ ಭಾಗ್ಯಶ್ರೀ ಜಹಗೀರದಾರ,ಕೃಷಿ ಇಲಾಖೆ ಜಂಟಿ ನಿರ್ದೇಶಕ, ಡಾ. ಕಿರಣ, ಪ್ರಿಯದರ್ಶಿನಿ ಹಿರೇಮಠ ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಮಹಾವಿದ್ಯಾಲಯ ಪ್ರಾಚಾರ್ಯರಾದ ಜಯರಾಮ್ ಲಮಾಣಿ , ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾಗನೂರ, ವೈದ್ಯಧಿಕಾರಿಗಳಾದ ಡಾ ಅವಿನಾಶ್,ಡಾ. ಎನ್ ಬಿ ಕರ್ಲವಾಡ, ಶರಣಪ್ಪ ಕಡ್ಲಿಬಿಷ್ಠಿ, ಸುಭಾಸ್ ಮಂಗಳಿ ಹಾಗೂ ಮಹಾವಿದ್ಯಾಲಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.