ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ
ನವಲಗುಂದ,ಜೂ18 : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂದವರು ಸೋಮವಾರ ತಾಲೂಕಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಸೈಯ್ಯದ ಅಮಾನುಲ್ಲಾ ಎಸ್.ಖಾಜಿ ಇವರು ಬಕ್ರೀದ ಹಬ್ಬದ ಮಹತ್ವ ತಿಳಿಸಿ ಪ್ರವಾದಿ ಇಬ್ರಾಹಿಂರವರ ಜೀವನದಲ್ಲಿ ನಡೆದ ಘಟನೆಯ ವಿವರ ತಿಳಿಸಿಕೊಟ್ಟು ನಾವೆಲ್ಲ ಹಜರತ್ ಪ್ರವಾದಿ ಮಹಮ್ಮದ ಪೈಗಂಬರವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬೇಕು,
ಈ ಬಕ್ರೀದ ಹಬ್ಬವು ಶಾಂತಿ ಮತ್ತು ಸಂತೋಷವನ್ನು ತರಲಿ, ಅಲ್ಲಾಹನು ಪ್ರತಿಯೊಬ್ಬರ ಪ್ರಾರ್ಥನೆಗಳನ್ನು ಸ್ವೀಕರಿಸಲಿ, ಕರುಣೆ, ಸಮೃದ್ಧ ಮತ್ತು ಸಂತೋಷದ ಜೀವನ ನೀಡಲಿ ಎಂದು ಅಲ್ಲಾಹನಲ್ಲಿ ಪ್ರಾಥಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ವಿನೋದ ಅಸೂಟಿ, ಮುಸ್ಲಿಂ ಸಮಾಜದ ಮುಖಂಡರಾದ ಉಸ್ಮಾನ ಬಬರ್ಚಿ, ಮೋದಿನ ಶಿರೂರ, ಅಬ್ಬಾಸಲಿ ದೇವರಿಡು, ದಾವಲಸಾಬ ಮಸೂತಿ, ರಿಯಾಜ ಪೀರಜಾದೆ, ಮಾಬುಸಾಬ ಯರಗುಪ್ಪಿ, ಬಾಬಾಜಾನ್ ಮುಲ್ಲಾ ಸೈಪುದ್ದೀನ ಅವರಾದಿ, ರಹೀಮಾನಸಾಬ್ ಧಾರವಾಡ, ರಿಯಾಜಅಹ್ಮದ ನಾಶಿಪುಡಿ, ಎ ಎಂ ನದಾಫ್,ಸಿರಾಜ್ ಧಾರವಾಡ, ಮಹಮ್ಮದ ತಾಜುದ್ದಿನ ಹುನಗುಂದ, ಅಲ್ಲಾಭಕ್ಷ ಗುಳೇದ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.