ಬಕ್ರೀದ್ ಹಬ್ಬ: ವಿವಿಧ ಜಾತಿಯಗಿಡ ನೆಟ್ಟು ಸೌಹಾರ್ದತೆ
ಸಂಜೆವಾಣಿ ನ್ಯೂಸ್
ಮೈಸೂರು, ಜೂ.18:- ಬಕ್ರೀದ್ ಹಬ್ಬದ ಅಂಗವಾಗಿ ನರಸಿಂಹರಾಜ ಕ್ಷೇತ್ರದಲ್ಲಿರುವ ವಾರ್ಡ್ ನಂ.35ರ ತ್ರಿವೇಣಿ ವೃತ್ತದಲ್ಲಿ ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ಹಿಂದೂ ಮುಸಲ್ಮಾನರು ಜತೆಗೂಡಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ನಾವೆಲ್ಲ ಒಂದು ಎಂಬ ಸಂದೇಶ ಸಾರಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಬಿ.ಆನಂದ್, ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾದರ್Àವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ, ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿವೆ. ಹೀಗಾಗಿ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಾರ್ಡ್ ಅಧÀ್ಯಕ್ಷ ಬಸವರಾಜು ಮಸಳ್ಳಿ, ಪ್ರಭಣ್ಣ, ಮಣಿರತ್ನಂ, ಕಿರಣ್, ಗೋವಿಂದ, ಮಹೇಶ್, ಅಫ್ತಾಬ್ ಸಲಿಂ ಅಕ್ಬರ್, ನಯಾಜ್, ಸುಮ, ಇರ್ಫಾನ್, ಸಮಿಉಲ್ಲಾ ಖಾನ್, ಹಿಂದೂ ಹಾಗೂ ಮುಸಲ್ಮಾನ್ ಮುಖಂಡರು ಭಾಗವಹಿಸಿದ್ದರು.