ಒಳಪಂಗಡ ಮರೆತು ಒಗ್ಗೂಡುವುದು ಅವಶ್ಯ
ಹುಬ್ಬಳ್ಳಿ,ಜೂ18: ಗಾಣಿಗರು ಉತ್ತರ ದಕ್ಷಿಣ, ಸಜ್ಜನ ಕರಿಕುಲ, ಜ್ಯೋತಿಪಣ ತೇಲಿ ಮುಂತಾದ ಒಳಪಂಗಡಗಳನ್ನು ಮರೆತು ನಾವು ಗಾಣಿಗರು ಎಂದು ಘಟ್ಟಿ ಧ್ವನಿಯಿಂದ ಒಗ್ಗೂಡುವುದು ಅತೀ ಅವಶ್ಯಕವಿದೆ ಎಂದು ಮೈಸೂರಿನ ಅಂತರಾಷ್ಟ್ರೀಯ ಕ್ರೀಡಾಪಟು ಯೋಗೇಂದ್ರ ಮಾದಪ್ಪ ಹೇಳಿದರು,
ಅವರು ಹುಬ್ಬಳ್ಳಿಯ ಬ್ಯಾಂಕರ್ಸ್ ಭವನದಲ್ಲಿ ಜರುಗಿದ, ಜ್ಞಾನಯೋಗಿ ವಿದ್ಯಾಸಂಸ್ಥೆ (ರಿ) ಧಾರವಾಡ ಸಂಸ್ಥೆಯ ಉದ್ಘಾಟನೆ ಪದಾಧಿಕಾರಿಗಳ ಪದಗ್ರಹಣ ವೈ.ಬಿ. ಕಡಕೋಳರ ಸಾರಥ್ಯದಲ್ಲಿ ಪ್ರಕಟಗೊಂಡ ಗಾಣಿಗರ ಹೆಜ್ಜೆಗಳು ಪುಸ್ತಕ ಬಿಡುಗಡೆ, ಗಾಣಿಗ ರತ್ನ ರಾಜ್ಯ ಪ್ರಶಸ್ತಿ ಲೇಖಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಣಿಗರು ನಮ್ಮ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಒಗ್ಗಟ್ಟು ಇಲ್ಲ. ಕಾರಣ ಊರಿಗೊಂದು ಸಂಘಗಳು ಉದಯ ಆಗಿವೆ ಎಂದು ಕಳವಳ ವ್ಯಕ್ತಪಡಿಸಿದ ಮಾದಪ್ಪ ಅವರು, ಎಲ್ಲಾ ಒಳಪಂಗಡಗಳು ಮತ್ತು ಸಂಘಗಳು ಏಕತೆಯಿಂದ ಹೋರಾಟ ಮಾಡುವುದು ಅತೀ ಅವಶ್ಯಕ ಇದೆ ಎಂದರು.
ಸಾನಿಧ್ಯ ವಹಿಸಿದ್ದ ಕೊರ್ತಿ ಕೋಲಾರದ ಯೋಗಿ ಕಲ್ಲಿನಾಥ ಸ್ವಾಮೀಜಿ ಮಾತನಾಡಿ, ವಿಜಯಪುರ ಜ್ಞಾನಯೋಗಿ ವಿದ್ಯಾಸಂಸ್ಥೆಯ ಲಿಂ. ಸಿದ್ದೇಶ್ವರ ಶ್ರೀಗಳ ಹೆಸರಿನಿಂದ ಉದಯವಾದ ಈ ಸಂಸ್ಥೆ ಜನಪರ ಕಾರ್ಯಕ್ರಮ ರೂಪಿಸಲಿ, ಗಾಣಿಗ ನಿಗಮ ಆಗಲು ಗಾಣಿಗ ಸಮಾಜದ ವಿವಿಧ ಸಂಘಗಳು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ. ಸಮಾಜದ ಹೋರಾಟದಲ್ಲಿ ತಾವು ಭಾಗಿಯಾಗುವುದಾಗಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಜಿ.ಪಂ. ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆರ್.ಜಿ. ಪಾಟೀಲ್, ಜಿ.ಎಸ್. ಛಬ್ಬಿ, ಅಶೋಕ ನವಲಗುಂದ, ಮೇಘನಾ ಮಾತನಾಡಿದರು. ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶರಣಪ್ಪಗೌಡ ಕೆಂಚಮ್ಮನವರ, ಪ್ರಕಾಶ ಬಾಳೆಕುಂದ್ರಿ, ಮಾಲತೇಶ ಹಂಚಿನಾಳ, ಅಶೋಕ ಮಜ್ಜಿಗುಡ್ಡ, ಅಶೋಕ ಶಿರೂರ, ರಮೇಶ್ ಉಟಗಿ, ಕೆ.ಎಂ. ಗದಗೇರಿ, ಕೆ.ಬಿ. ಕುರಹಟ್ಟಿ, ಎಲ್.ಐ. ಲಕ್ಕಮ್ಮನವರ್, ರವಿಶಂಕರ್ ಗಡಿಯಪ್ಪನವರ್, ಯಶಸ್ವಿನಿ ಗಾಣಿಗೇರ್ ಸೇರಿದಂತೆ ಅನೇಕರಿದ್ದರು.