ಆದರ್ಶ, ಮುರಾರ್ಜಿ ಶಾಲೆಗೆ ಆಯ್ಕೆ
ಬಾದಾಮಿ,ಜೂ18: ನಗರದ ವಡ್ಡರ ಓಣಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಮರ್ಥ ಮಲ್ಲಿಕಾರ್ಜುನ ಹಾದಿಮನಿ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಹಾಗೂ ಚೈತ್ರ ರಂಗಪ್ಪ ರೋಣದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ವಿ.ಎಸ್.ಶೆಟ್ಟರ ತಿಳಿಸಿದ್ದಾರೆ.