ಗಡಿ ಭದ್ರತಾ ಪಡೆಯ ಯೋಧರ ಕಾರ್ಯ ಶ್ಲ್ಯಾಘನೀಯ
ಬಾದಾಮಿ,ಜೂ18: ದೇಶದ ಗಡಿಯಲ್ಲಿ ಹಗಲಿರುಳು ಸೇವೆ ಮಾಡುತ್ತಿರುವ ಭಾರತೀಯ ಅರೆ ಸೇನೆಯ ಗಡಿ ಭದ್ರತಾ ಪಡೆಯ ಯೋಧರ ಕಾರ್ಯ ಶ್ಲ್ಯಾಘನೀಯ ಎಂದು ಶ್ರೀ ಮೈಲಾರಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಯುವಮುಖಂಡ ಮಹೇಶ ಹೊಸಗೌಡ್ರ ಹೇಳಿದರು.
ಅವರು ಪಟ್ಟಣದ ಹೊರವಲಯದ ಜಯನಗರದ ತಾಲೂಕಾ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಅರೆ ಸೇನೆಯ ಗಡಿ ಭದ್ರತಾ ಪಡೆಯಲ್ಲಿ ಸತತ 23 ವರ್ಷಗಳ ಸೇವೆ ಸಲ್ಲಿಸಿ ಆಗಮಿಸಿರುವ ಯೋಧ ಪ್ರಕಾಶ ಹೊಳೆಬಸಪ್ಪ ಗಾಣಿಗೇರ ಅವರಿಗೆ ಗೌರವಪೂರ್ವಕ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಭದ್ರತೆಯ ಸಲುವಾಗಿ ಸೇವೆ ಮಾಡುತ್ತಿರುವ ಯೋಧರ ಕಾರ್ಯ ಮೆಚ್ಚುವಂತಹದ್ದು ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಕಾಶ ಹೊಳೆಬಸಪ್ಪ ಗಾಣಿಗೇರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಟಿ.ಎನ್.ಮೊಖಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ, ಎಸ್.ಜಿ.ಬೋನಗೇರ, ಜಿ.ಎಸ್.ದೇಸಾಯಿ, ಉಮೇಶ ಮೊಖಾಶಿ, ಸಣ್ಣಸಕ್ಕರಗೌಡರ ಹಾಜರಿದ್ದರು.