ಮಕ್ಕಳನ್ನು ಸದ್ಗುಣಿಗಳನ್ನಾಗಿ ಮಾಡಬೇಕು
ಹುಬ್ಬಳ್ಳಿ,ಜೂ.18: ಮಕ್ಕಳನ್ನು ಬರೀ ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು. ಅವರಿಗೆ ಸಂಸ್ಕಾರ ನೀಡುವುದು ಮುಖ್ಯ. ಒಳ್ಳೆಯ ಆಚಾರ-ವಿಚಾರ ಹೇಳಿಕೊಡಬೇಕು. ಸದಾಚಾರಿ ಸದ್ಗುಣಿಗಳನ್ನಾಗಿ ಮಾಡಬೇಕು ಎಂದು ಡಂಬಳ-ಗದಗ ಎಡೆಯೂರು ಸಂಸ್ಥಾಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.
ಅವರು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿ ಬಣಗಾರ ಸಮಾಜದ
ಆಶ್ರಯದಲ್ಲಿ ಜರುಗಿದ 2023-24ನೇ ಸಾಲಿನಲ್ಲಿ ಶೇ. 80ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುವ ಬಣಗಾರ ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಉನ್ನತ ವ್ಯಾಸಂಗ ಮಾಡಿದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಹುಬ್ಬಳ್ಳಿ ಬಣಗಾರ ಸಮಾಜ ಅಧ್ಯಕ್ಷ ಅನೀಲ ಕವಿಶೆಟ್ಟಿ ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಟಾಪರ್‍ಗಳಾದ 8 ವಿದ್ಯಾರ್ಥಿಗಳಿಗೆ ಸಿಎ ಸುರೇಶ ಚೆನ್ನಿ ಅವರು ಕೊಡಮಾಡಿದ ನಗದು ಬಹುಮಾನ ಸಹಿತ ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಿ.ಎ. ಸುರೇಶ ಚೆನ್ನಿ, ಹುಬ್ಬಳ್ಳಿ ಬಣಗಾರ ಸಮಾಜದ ಉಪಾಧ್ಯಕ್ಷ ವೀರಣ್ಣ ಎಂ. ಹೂಲಿ, ಮಲ್ಲಿಕಾರ್ಜುನ ಶಿರಿಗಣ್ಣನವರ, ಕಾರ್ಯದರ್ಶಿ ಶ್ರೀಶೈಲ ಜೋಡಳ್ಳಿ, ಬಸವರಾಜ ಹೂಲಿ, ದಯಾನಂದ ಈಚU Éೀರಿ, ರವಿ ಉಮದಿ, ಗಂಗಾಧರ ಕುರ್ಲಿ, ರಾಜಶೇಖರ ಬಳ್ಳಾರಿ, ಎಂ.ಎಸ್. ಗರಗ, ಹತಪಾಕಿ, ಎಸ್‍ಎಮ್. ಹೂಲಿ ಹಾಗೂ ಬಣಗಾರ ಸಮಾಜದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.