ಮಹದೇಶ್ವರ ಬೆಟ್ಟದಲ್ಲಿ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ
ಸಂಜೆವಾಣಿ ವಾರ್ತೆ
ಹನೂರು : ಜೂ.18:- ತಾಲೂಕಿನ ಮೇಲೆ ಮಹದೇಶ್ವರ ಬೆಟ್ಟದಲ್ಲಿ ಹೆಚ್.ಕೃಷ್ಣಸ್ವಾಮಿ ಮೆಮೋರಿಯಲ್ ಟ್ರಸ್ಟ್ ಮತ್ತು ರೋಟರಿ ಮಿಡ್ಟೌನ್, ಜನನಿ ಹಾಸ್ಪಿಟಲ್, ಕೊಯಮತ್ತೂರು ಅರವಿಂದ ಐ ಹಾಸ್ಪಿಟಲ್ ವತಿಯಿಂದ ಮಹದೇಶ್ವರ ಬೆಟ್ಟದ ಸಾಲೂರು ಮಠ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರದಲ್ಲಿ ಸುಮಾರು 500 ರಿಂದ 800ಕ್ಕೂ ಹೆಚ್ಚು ರೋಗಿಗಳು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಮತ್ತು ಇದರಲ್ಲಿ 28 ಜನ ಕಣ್ಣಿನ ಉಚಿತ ಶಸ್ರ್ತ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಸಾಲೂರು ಮಠಾಧ್ಯಕ್ಷರು ಶಾಂತ ಮಾಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಹನೂರು ಕ್ಷೇತ್ರದ ಶಾಸಕರ ಮಂಜುನಾಥ್ ರವರಿಗೆ ವಿಶೇಷವಾಗಿ ಡಾಕ್ಟರ್ ಪ್ರೀತನ್ ನಾಗಪ್ಪ ಅವರು ಆರೋಗ್ಯ ತಪಾಣೆಯನ್ನು ಮಾಡುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ.
ಹೆಚ್.ಕೆ.ಟ್ರಸ್ಟ್ ಮುಖ್ಯಸ್ಥರಾದ ಪ್ರೇಮಲತಾ ಕೃಷ್ಣಸ್ವಾಮಿ ರವರು ಮತ್ತು ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಮತ್ತು ಮುಖ್ಯ ಆಯೋಜಕರಾದ ಬೆಂಗಳೂರು ಡಿವೈಎಸ್ಪಿ ಮಹಾನಂದ್. ಪ್ರವೀಣ್ ಕುಮಾರ್, ಪ್ರವೀಣ್ ರಾಜು ಗೌಡ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು, ಕೊಳ್ಳೇಗಾಲ, ರೋಟರಿ ಮಿಟಾನ್ ನ ಅಧ್ಯಕ್ಷರಾದ ದಕ್ಷಿಣ ಮೂರ್ತಿ, ಲೋಕೇಶ್ ಮತು ವಿಶ್ವಚೇತನ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಬೋಧಕ ಭೋಧಕೇತರ ಸಿಬಂದಿಗಳು ಹಾಜರಿದ್ದರು.
ಮತ್ತು ವಿವೇಕಾನಂದ ಡ್ರೈವಿಂಗ್ ಸ್ಕೂಲ್ ನ ರಾಜೇಶ್, ಹಾಗೂ ಅರುಣ್ ಮತ್ತು ಇನ್ನು ಆನೇಕ ಗಣ್ಯರು ಹಾಜರಿದ್ದು, ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟಿದ್ದಾರೆ.