ನೀರು ಸಂಜೀವಿನಿ ಪೆÇೀಲಾಗದಂತೆ ಬಳಕೆ ಮಾಡಿ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.18: ನೀರು ಸಕಲ ಜೀವಿಗಳಿಗೂ ಜೀವ ಸಂಜೀವಿನಿ ಜೀವ ಜಲವನ್ನು ಗ್ರಾಮೀಣ ಜನ ಜವಾಬ್ದಾರಿಯಿಂದ ಬಳಕೆ ಮಾಡಬೇಕು ಒಂದೇ ಒಂದು ಹನಿ ನೀರು ಪೆÇೀಲಾಗದಂತೆ ಎಚ್ಚರಿಕೆ ವಹಿಸಬೇಕೆಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಅವರು ತಾಲ್ಲೂಕಿನ ಶೀಳನೆರ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಆರಂಭಿಸುತ್ತಿರುವ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು.
ಜಲ್ ಜೀವನ್ ಯೋಜನೆ ಅಡಿಯಲ್ಲಿ ಸುಮಾರು 23 ಲಕ್ಷ ಮೊತ್ತದಲ್ಲಿ ಗ್ರಾಮದ 75 ಮನೆಗಳಿಗೆ ಶುದ್ದ ನೀರಿನ ಪೂರೈಕೆ ಮಾಡಲಾಗುತ್ತಿದೆ. ಶುದ್ದ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು. ಗ್ರಾಮೀಣ ಜನರ ಆರೋಗ್ಯಕ್ಕೆ ಶುದ್ದ ನೀರು ಅತ್ಯವಶ್ಯಕ. ಮನುಷ್ಯನ ಮೂಲಭೂತ ಹಕ್ಕಾದ ಆರೋಗ್ಯಕ್ಕೆ ನೇರ ಸಂಪರ್ಕವಿರುವ ಶುದ್ಧ ನೀರಿನ ಸೌಲಭ್ಯ ಒದಗಿಸುವುದು ಸರ್ಕಾರಗಳ ಮತ್ತು ಜನ ಪ್ರತಿನಿಧಿಗಳ ಜವಾಬ್ದಾರಿ ಆಗಿರುತ್ತದೆ. ಇದನ್ನು ನಾನು ಅರ್ಥಮಾಡಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಈ ಸಂಧರ್ಭದಲ್ಲಿ ಕುಡಿಯುವ ನೀರಿನ ಪೂರೈಕೆ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರವೀಣ್, ಹರಳಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚನ್ನಾಪುರ ಸಣ್ಣೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ್, ಮಂಜೇಗೌಡ, ಯೋಗೇಶ್, ಚನ್ನವೀರ, ಲೋಹಿತ್, ಸಿದ್ದೇಗೌಡ, ಬ್ಯಾಲದಕೆರೆ ಮರೀಗೌಡ, ಕೃಷ್ಣೇಗೌಡ, ಕರ್ತೇನಹಳ್ಳಿ ಯೋಗೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.