ಹಾಲಿಗೆ ಕೆಮಿಕಲ್ ಮಿಶ್ರಣ-ಸಿಕ್ಕಿಬಿದ್ದ ಆರೋಪಿ
ಕೋಲಾರ,ಜೂ,೧೮-ಖಾಸಗಿ ಡೇರಿ ಹಾಲಿಗೆ ಕೆಮಿಕಲ್ ಮಿಶ್ರಣ ಮಾಡುತ್ತಿದ್ದ ಕಳ್ಳರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೆಜಿಎಫ್ ಸಮೀಪ ನಡೆದಿದೆ.
ಕೆಜಿಎಫ್ ತಾಲ್ಲೂಕು ಗುಟ್ಟಹಳ್ಳಿ ಗ್ರಾಮದ ಬಳಿರುವ ದೊಡ್ಲ ಡೇರಿಗೆ ಸೇರಿದ ಹಾಲಿಗೆ ಕೆಮಿಕಲ್ ಹಾಲು ಮಿಶ್ರಣ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಗ್ರಾಮದ ಕೆಲವು ಮುಖಂಡರು ಹಾಗೂ ಕೆಲವು ಸಂಘಟನೆಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದಾಗ ಹಾಲಿಗೆ ಕೆಮಿಕಲ್ ಮಿಶ್ರಣ ಮಾಡುತ್ತಿದ್ದ ವೇಳೆ ಹಾಲಿಗೆ ಕೆಮಿಕಲ್ ಮಿಶ್ರಣ ವೇಳೆ ಆರೋಪಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಹಲವು ದಿನಗಳಿಂದ ನಡೆಯುತ್ತಿದ್ದ ದಂಧೆಗೆ ಆರೋಪಿಗೆ ಸಾರ್ವಜನಿಕರು ಎಚ್ಚರಿಕೆ ನೀಡಿ ಆರೋಪಿಯನ್ನು ಬಿಟ್ಟು ಕಳುಹಿಸಿದ್ದಾರೆ.