ನೂತನ ಈದ್ಗಾ ನಿರ್ಮಾಣ ಸಚಿವರ ಭರವಸೆ
ವಿಜಯಪುರ.ಜೂ೧೮:ಪಟ್ಟಣದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಗೆ ಮುಂದಿನ ಸಾಲಿನಲ್ಲಿಯೇ ದೇವನಹಳ್ಳಿ ರಸ್ತೆಯ ಜಂಗ್ಲಿ ಪೀರ್ ಬಾಬಾ ದರ್ಗಾಬಳಿ ಮುಸ್ಲಿಮರ ಹಬ್ಬಗಳ ಸಂದರ್ಭದಲ್ಲಿನ ಸಾಮೂಹಿಕ ಪ್ರಾರ್ಥನೆಗೆ ನೂತನ ಈದ್ಗಾ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ಅವರು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮುಬಾರಕ್ ರವರ ನಿವಾಸಕ್ಕೆ ಬಕ್ರೀದ್ ಹಬ್ಬದ ಪ್ರಯುಕ್ತ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಿ ಮಂಜುನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ರಾಜಣ್ಣ, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿಎಂ ನಾಗರಾಜ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಹೋಬಳಿ ಅಧ್ಯಕ್ಷ ವೀರೇಗೌಡ, ಟೌನ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಫ್ಜಲ್, ಪುರಸಭಾ ಸದಸ್ಯರಾದ ಹನೀಫುಲ್ಲ, ನಿಕತ್ ಸಲ್ಮಾ ಮುಬಾರಕ್, ಪುರಸಭಾ ಮಾಜಿ ಸದಸ್ಯ ಏಜಾಜ್ ಅಹ್ಮದ್, ಜೆಎನ್ ಶ್ರೀನಿವಾಸ್ ಉಪಸ್ಥಿತರಿದ್ದರು.