ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಲಿ
(ಸಂಜೆವಾಣಿ ಪ್ರತಿನಿಧಿಯಿದ)
ಚಿಕ್ಕಬಳ್ಳಾಪುರ ಜೂ.೧೮- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅಪಾರ ಬಹುಮತದೊಂದಿಗೆ ಆಯ್ಕೆಗೊಂಡ ಅಭಿವೃದ್ಧಿಯ ಹರಿಕಾರ ಎಂಬ ಟ್ಯಾಗ್ ಲೈನ್ ಹೊಂದಿದ್ದ ಸಂಸದ ಡಾಕ್ಟರ್ ಕೆ ಸುಧಾಕರ್ ರವರ ಮೇಲೆ ಕ್ಷೇತ್ರದ ಜನತೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಯನ್ನು ಅತ್ಯಂತ ಪ್ರಮುಖ ವಿಷಯವಾಗಿ ಪರಿಗಣಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವರೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಬರಪಿಡಿತ ಬಯಲು ಸೀಮೆಯ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರ ಜಿಲ್ಲೆ ಒಳಗೊಂಡಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಿರುದ್ಯೋಗ ತಂಡವಾಡುತ್ತಿದೆ . ಉದ್ಯೋಗವಿಲ್ಲದ ವಿದ್ಯಾವಂತರು ಪೋಷಕರಿಗೆ ಹೊರಟಾಗಿ ಸಮಾಜಕ್ಕೆ ಬೆಳಕಾಗಳು ವಿಫಲರಾಗಿ ಅರ್ಧ ಹೊಟ್ಟೆ ತುಂಬುವ ಅರೆಬರೆ ಕೆಲಸಗಳನ್ನು ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವುದು ಇಲ್ಲಿ ನಿರುದ್ಯೋಗ ಸಮಸ್ಯೆ ಬೃಹತ್ ಆಗಿ ಬೆಳೆದಿರುವುದಕ್ಕೆ ಕಾರಣವಾಗಿದೆ.
ಸಮಸ್ಯೆಗಳ ಸುಳಿಯಲ್ಲಿ ಬಳಲಿತ್ತಿರುವ ನಾಗರೀಕರಿಗೆ ಸಚಿವ ಡಾಕ್ಟರ್ ಕೆ ಸುಧಾಕರ್ ರವರು ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಾರೆ ಎಂಬ ನಂಬಿಕೆಯನ್ನು ಸಹ ಹೊಂದಿದ್ದಾರೆ.
ಅವರು ಚಿಕ್ಕಬಳ್ಳಾಪುರ ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಸಂದರ್ಭದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಒಳಗೊಂಡಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಅದು ಕೆಲವು ಈಗಲೂ ಅಪೂರ್ಣವಾಗಿದೆ ಅಂತಹ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸುವ ಹೊಣೆಗಾರಿಕೆಯೂ ಸಹ ಈಗ ನೂತನವಾಗಿ ಸಂಸದರಾಗಿ ಆಯ್ಕೆಗೊಂಡಿರುವ ಡಾಕ್ಟರ್ ಕೆ ಸುಧಾಕರ್ ಅವರ ಹೊಣೆಗಾರಿಕೆ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ ಇದಕ್ಕೆ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆ, ಶಿಕ್ಷಣ ಕಾಶಿ ಇಲ್ಲಿ ಪೂರ್ವ ಪ್ರಾಥಮಿಕ ವಿದ್ಯಾಸಂಸ್ಥೆಯನ್ನು ಒಳಗೊಂಡಂತೆ ಇಂಜಿನಿಯರಿಂಗ್ ಮೆಡಿಕಲ್ ತನಕ ಅನೇಕ ವಿದ್ಯಾಸಂಸ್ಥೆಗಳು ಇದ್ದು ಪ್ರತಿ ವರ್ಷ ಈ ವಿದ್ಯಾ ಸಂಸ್ಥೆಗಳು ನಿರುದ್ಯೋಗಿಗಳನ್ನು ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ವಿದ್ಯಾವಂತ ಡಾಕ್ಟರ್ ಮತ್ತು ಇಂಜಿನಿಯರ್ ಗಳು ಸಹ ಸಮರ್ಪಕವಾಗಿ ಸರ್ಕಾರಿ ಉದ್ಯೋಗಾವಕಾಶಗಳು ಇಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವುದು ಸಹ ಸೂರ್ಯನಷ್ಟೇ ಸತ್ಯವಾದ ಸಂಗತಿಯಾಗಿದೆ.
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಹಾಗೂ ಈಗ ಕೇಂದ್ರ ಸರ್ಕಾರದಲ್ಲಿ ಬಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಆಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಅವರ ಸರ್ಕಾರ ಆಡಳಿತ ನಡೆಸುವ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಬೈಲ್ ಬಿಡಿಭಾಗಗಳ ಕೈಗಾರಿಕೆ ಸ್ಥಾಪನೆಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದರು ಆದರೆ ಇದು ಉಪಯೋಗ ಆಗಲಿಲ್ಲ ಕನ್ನಡಿಯಲ್ಲಿ ಮೃಷ್ಟಾನ್ನವನ್ನು ಇಟ್ಟು ಇದನ್ನು ನೀವು ತಿನ್ನಿ ಎಂಬಂತೆ ಅಪಹಸ್ಯಕ್ಕೀಡಾಗಿದೆ.
ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ನಿರುದ್ಯೋಗ ನಿವಾರಣೆಗಾಗಿ ಬೃಹತ್ ಜವಳಿ ಉದ್ಯಮ ಈ ಹಿಂದೆ ಘೋಷಿಸಿದಂತೆ ಮೊಬೈಲ್ ಬಿಡಿ ಭಾಗಗಳ ಉತ್ಪಾದನಾ ಘಟಕ ಒಳಗೊಂಡಂತೆ ಉಕ್ಕು ಮತ್ತು ಕಬ್ಬಿಣ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾರಿಕೆಗಳನ್ನು ಡಾಕ್ಟರ್ ಕೆ ಸುಧಾಕರ್ ಮತ್ತು ಎಚ್ ಡಿ ಕುಮಾರಸ್ವಾಮಿ ರವರುಗಳು ದೊಡ್ಡ ಮನಸ್ಸು ಮಾಡಿ ನರೇಂದ್ರ ಮೋದಿ ಅವರ ಸಹಕಾರದೊಂದಿಗೆ ಬರಪಿಡಿತ ಬಯಲು ಸೀಮೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಆದರೆ ಸಾವಿರಾರು ನಿರುದ್ಯೋಗಗಳಿಗೆ ಉದ್ಯೋಗಾವಕಾಶ ದೊರೆಯುತ್ತದೆ ಈ ನಿಟ್ಟಿನಲ್ಲಿ ನೂತನ ಸಂಸದ ಡಾ. ಕೆ ಸುಧಾಕರ್ ಅವರು ಗಮನ ಹರಿಸಬೇಕಾಗಿದೆ.
ಜಿಲ್ಲೆಯ ನಿರುದ್ಯೋಗ ನಿವಾರಿಸಿ
ಡಾಕ್ಟರ್ ಕೆ ಸುಧಾಕರ್ ಅವರಿಗೆ ಮತ್ತೊಂದು ಮನದಟ್ಟು ಮಾಡಬೇಕಾದ ಅಂಶ ಒಂದಿದೆ ನೀವು ಈ ಹಿಂದೆ ಮೂರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ನಿಮ್ಮ ಸಾಧನೆ ಜನತೆ ಇನ್ನೂ ಮರೆತಿಲ್ಲ ನೀವೇ ಸಂಸದರಾಗಿ ಆಯ್ಕೆಗೊಂಡರೆ ಮತ್ತಷ್ಟು ಅಭಿವೃದ್ಧಿ ಚಿಕ್ಕಬಳ್ಳಾಪುರದಲ್ಲಿ ಕಾಣಲು ಸಾಧ್ಯ ಹಾಗೂ ನಿಮ್ಮ ಅವಧಿಯಲ್ಲಿ ಸ್ಥಾಪನೆ ಆಗಿ ಕಾರ್ಯ ಆರಂಭ ಆಗದಿರುವ ಯೋಜನೆಗಳ ಪುನರ್ ಆರಂಭ ಸಾಧ್ಯ ಎಂಬ ವಿಶ್ವಾಸದಿಂದ ನಿಮಗೆ ೧.೬೩ ಲಕ್ಷಕ್ಕೂ ಅಧಿಕ ಬಹುಮತದಿಂದ ಜನತೆ ಸಂಸತ್ತಿಗೆ ಆಯ್ಕೆ ಮಾಡಿದ್ದಾರೆ. ನಿಮಗೆ ಐದು ವರ್ಷಗಳ ಕಾಲ ಅಧಿಕಾರ ನಡೆಸುವ ಅವಕಾಶ ಇದೆ. ಈ ಅವಕಾಶದಲ್ಲಿ ನೀವು ಚಿಕ್ಕಬಳ್ಳಾಪುರದ ಜನತೆಗೆ ನಿರುದ್ಯೋಗ ನಿವಾರಣೆಗೆ ಸಾಧ್ಯವಾದಷ್ಟು ಪ್ರಯತ್ನಿಸಿ ಯಶಸ್ಸು ಸಾಧಿಸಿದರೆ ನಿಮ್ಮ ಸಾಧನೆಯನು ಪುರಸ್ಕರಿಸಿ ಜನತೆ ನಿಮಗೆ ಬ್ರಹ್ಮರಥ ಕಟ್ಟುವರು ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂಬುದು ಈ ವರದಿಯ ಸದುದ್ದೇಶವಾಗಿದೆ