ಬಿಜೆಪಿ ಪ್ರತಿಭಟನೆ ಮೂರ್ಖತನದ ಪರಮಾವಧಿ
ಕೋಲಾರ,ಜೂ,೧೮- ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ,ಡಿಸೇಲ್ ದರ ಏರಿಕೆ ಮಾಡಿದೆ ರಾಜ್ಯಾದ್ಯಂತ ಪ್ರತಿಭಟಿಸುತ್ತಿರುವ ಬಿಜೆಪಿ ಪಕ್ಷದವರ ಮೂರ್ಖತನವು ಹಾಸ್ಯಸ್ಪದವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾದ್ಯಮದೊಂದಿಗೆ ಅವರು ಮಾತನಾಡಿ ಪ್ರತಿಭಟನೆಗೆ ಮುನ್ನ ಅವರು ಬಿಜೆಪಿ ಆಡಳಿತ ಇರುವ ಸರ್ಕಾರಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಎಷ್ಟಿದೆ ಎಂಬುವುದನ್ನು ಅರಿಯದೆ ರಾಜ್ಯದಲ್ಲಿ ಪ್ರತಿಭಟಿಸಲು ಮುಂದಾಗಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ವ್ಯಂಗವಾಡಿದ್ದಾರೆ.
ಕರ್ನಾಟಕದಲ್ಲಿ ಪೆಟ್ರೋಲ್ ದರ ರೂ ೧೦೨.೪೩ ಡಿಸೇಲ್ ದರ ರೂ ೮೮.೫೫ ಇದೆ, ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ದರ ರೂ ೧೦೯. ೪೪, ಡಿಸೇಲ್ ದರ ೯೭.೨೮, ಕೇರಳದಲ್ಲಿ ಪೆಟ್ರೋಲ್ ದರ ೧೦೬,೬೬ ಡಿಸೇಲ್ ದರ ೯೫.೬೦, ತೆಲಂಗಾಣದಲ್ಲಿ ಪೆಟೋಲ್ ದರ ೧೦೭,೪೦ ಡಿಸೇಲ್ ದರ ೯೫,೪೬ ರಾಜಸ್ಥಾನದಲ್ಲಿ ಪೆಟ್ರೋಲ್ ದರ ೧೦೪,೮೬ ಡಿಸೇಲ್ ದರ ೯೦.೩೬ ಇರುವುದನ್ನು ಅರಿಯದೆ ಕರ್ನಾಟಕದಲ್ಲಿ ಮಾತ್ರ ಏರಿಕೆ ಮಾಡಿದಂತೆ ಬೊಬ್ಬೆ ಹೊಡೆಯುತ್ತಿರುವುದು ಎಂದು ಟೀಕಿಸಿದರು,
ಮೋದಿಯವರ ಪ್ರಧಾನಿಯಾದ ಸಂರ್ಭಧಲ್ಲಿ ಪೆಟ್ರೋಲ್ ದರ ರೊ ೭೨.೨೬ ಡಿಸೇಲ್ ಬೆಲೆ ರೂ ೫೭ ರೊ ಇತ್ತು. ೨೦೨೪ ಜೂನ್‌ನಲ್ಲಿ ರೂ ೯೮.೭೬ ಡಿಸೇಲ್ ಬೆಲೆ ೮೫.೯೩ ರೂ ಅಗಿದೆ. ಇದನ್ನು ಹೆಚ್ಚು ಮಾಡಿರುವುದು ಬಿಜೆಪಿ ಸರ್ಕಾರದ ನರೇಂದ್ರ ಮೋದಿಯವರ ಆಡಳಿತದಲ್ಲಿ, ಕಚ್ಚಾ ತೈಲ ಬೆಲೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬ್ಯಾರೆಲ್ ದರ ೧೧೩ ಡಾಲರ್ ಇತ್ತು ಈಗಾ ೮೨,೩೫ ಡಾಲರ್‌ಗೆ ಇಳಿದಿದೆ ಹೀಗಾಗಿ ಯಾರ ವಿರುದ್ದ ಪ್ರತಿಭಟಿಸ ಬೇಕೆಂಬ ಅರಿವು ಇಲ್ಲದೆ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ದೂರಿದರು,
ಅನಿಲ ದರವು ಸಿಲಿಂಡರ್ ಬೆಲೆ ೪೧೦ ರೂ ಇತ್ತು ಈಗಾ ೧೧೦೦ ರೂವರೆಗೆ ಏರಿಕೆ ಮಾಡಿ ಈಗಾ ೮೦೫ ರೂಗಳಾಗಿದೆ. ಈ ದರವನ್ನು ಹೆಚ್ಚಳ ಮಾಡಿದಾಗ ಬಡಜನರ ಬಗ್ಗೆ, ಜನಸಾಮಾನ್ಯರ ಬಗ್ಗೆ ಬಿಜೆಪಿ ಪಕ್ಷದವರಿಗೆ ಕಾಳಜಿ ಇರಲಿಲ್ಲವೇ ಎಂದು ಪ್ರಶ್ನಿಸಿದರು,
ಬಿಜೆಪಿಯುವರು ಪ್ರತಿಭಟಿಸ ಬೇಕಾಗಿರುವುದು ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಎಂಬುವುದನ್ನು ಅರಿಯ ಬೇಕಾಗಿದೆ. ಬೇರೆ ರಾಜ್ಯಗಳು ಪಾವತಿಸಿರುವ ತೆರಿಗೆ ಎಷ್ಟು. ಹಂಚಿಕೆ ಮಾಡಿರುವುದು ಎಷ್ಟು ಎಂಬುವುದನ್ನು ಹೋಲಿಕೆ ಮಾಡಿ ರಾಜ್ಯದ ಮೇಲೆ ಬಿಜೆಪಿ ಅವರಿಗೆ ನಿಜವಾದ ಕಾಳಜಿ ಇದ್ದಲ್ಲಿ ಸಾಮಾಜಿಕ ನ್ಯಾಯ ಕೊಡಿಸಲಿ ಎಂದು ಸವಾಲ್ ಹಾಕಿದರು.