ಬಕ್ರೀದ್ ಸಂಭ್ರಮ:ಜಿಲ್ಲಾದ್ಯಂತ ಸಾಮೂಹಿಕ ಪ್ರಾರ್ಥನೆ
ಕಲಬುರಗಿ :ಜೂ.17: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಸ್ನೇಹ, ಸೌಹಾರ್ದತೆ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ 6 ಗಂಟೆಯಿಂದಲೇ ನಗರದ ಜುಮ್ಮಾ ಮಸೀದಿಗಳು ಮತ್ತು ಈದ್ಗಾ ಮೈದಾನಗಳಲ್ಲಿ ‘ಈದುಲ್ ಅಝ್‍ಹಾ’ ನಿಮಿತ್ಯ ವಿಶೇಷ ನಮಾಜ್ ಮತ್ತು ಇಮಾಮಗಳಿಂದ ವಿಶೇಷ ಉಪನ್ಯಾಸದ ಮೂಲಕ ದೇಶದ ಏಕತೆ ಸುಭದ್ರತೆಗಾಗಿ ಪ್ರಾರ್ಥನೆ ಮಾಡಲಾಯಿತು
ನಗರದ ಐತಿಹಾಸಿಕ ಆಳಂದ್ ರಸ್ತೆಯ ಬಹಿಮನಿ ಈದ್ಗಾ ಮೈದಾನದಲ್ಲಿ ಮೌಲಾನಾ ವಿಖಾರ್ ಆರ್ಫಿ ಅವರು ಈದ್ ಪ್ರಯುಕ್ತ ಮಾತನಾಡಿ, ಏಕ್ ದೇವೋಪಾಸನ ಒಳಗಾಗಿ ಲೌಖಿಕ ಬದುಕು, ದ್ವೇಷ, ಮದ ಮತ್ಸರ ಹಾಗೂ ಗುರು ಹಿರಿಯರಿಗೆ ಮತ್ತು ವಿಶೇಷವಾಗಿ ತಂದೆ ತಾಯಿಗಳಿಗೆ ಅತ್ಯಂತ ಗೌರವಿತವಾಗಿ ಕಾಣುವ ಮೂಲಕ ದೇವರನ್ನು ಮೆಚ್ಚಿಸಬೇಕೆಂದು ಕರೆ ನೀಡಿದರು.
ತನ್ನ ಮನಸ್ಸುಗಳನ್ನು ಹತೊಟೆಯಲ್ಲಿಟ್ಟು ಅಸೂಯೆ, ಆಸೆ, ದುರಾಸೆಗಳಿಗೆ ಬರೆ ಹಾಕಿ ತ್ಯಾಗ ಮತ್ತು ಬಲಿದಾನ ಮಾಡಿ ಪರಸ್ಪರ ಪ್ರತಿ ಸಮಾನತೆ ಹಾಗೂ ಬಡವರ ನೆರವಿಗೆ ಧಾವಿಸುವ ಕಾಳಿಜಿಹೊಂದುವ ಮನಸ್ಥಿತಿ ಹೊಂದುವುದು ಮುಖ್ಯವಾಗಿದ್ದು, ಅನ್ಯಾಯವನ್ನು ತಡೆಯುವಂತರಾಗಬೇಕೆಂದು ಎಂದು ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಮಹನಗರ ಪಾಲಿಕೆ ಮತ್ತು ಜಿಲ್ಲಾ ಪೆÇಲೀಸ್ ಇಲಾಖೆಯ ಕಾರ್ಯ ಮತ್ತು ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮುಸ್ಲಿಂ ಬಾಂಧವರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶಾಂತಿಯುತ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಯದವರಿಗೆ ಅನ್ಯ ಸಮುದಾಯದವರೂ ಸಹ ಶುಭ ಹಾರೈಸಿದರು.