ಎನ್ ಸಿ ಸಿ ಕ್ಯಾಂಪಿನ ಮಕ್ಕಳ ಆರೋಗ್ಯದಲ್ಲಿ ಏರುಪೇರು  : ಆಸ್ಪತ್ರೆಗೆ ದಾಖಲು

ಶಿವಮೊಗ್ಗ, ಜೂ. 16: ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಎನ್ ಸಿಸಿ ಕ್ಯಾಂಪ್ ನಲ್ಲಿ ಭಾಗಿಯಾಗಿದ್ದ 9 ಜನರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.ಸಹ್ಯಾದ್ರಿ ಕಾಲೇಜಿನಲ್ಲಿ  ಎನ್ ಸಿಸಿ ಕ್ಯಾಂಪ್ ನಡೆದಿದೆ. 400 ಜನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇವರೆಲ್ಲರೂ ಕ್ಯಾಂಪ್ ನಲ್ಲಿ ನೀಡಿದ ಆಹಾರ ಸ್ವೀಕರಿಸಿದ್ದಾರೆ. ಇವರಿಗೆ ಇಬ್ಬರಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.ಇಬ್ಬರಲ್ಲಿ ವಾಂತಿ ಕಾಣಿಸಿಕೊಂಡಿದ್ದು ಉಳಿದ 7 ಜನ ಮಕ್ಕಳಿಗೆ ವಾಂತಿ ಆಗಿದೆ. ತಕ್ಷಣಕ್ಕೆ ಮೆಗ್ಗಾನ್ ಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಸದ್ಯ ದಾಖಲಾದ ಮಕ್ಕಳಲ್ಲಿ ಆರೋಗ್ಯ ಚೇತರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.